ಕಾನೂನು ತಜ್ಞರಿಗಿಂತ ನಮಗೆ ತಿಳುವಳಿಕೆ ಇದೆಯೇ?

0
13

ಬೆಂಗಳೂರು: ತಜ್ಞರಿಗಿಂತ ನಮಗೆ ತಿಳುವಳಿಕೆ ಇದೆಯೇ? ಆತಂಕ ಏಕೆ? ಎಂದು ನಟ ಉಪೇಂದ್ರ ಪ್ರಶ್ನಿಸಿದ್ದಾರೆ.
ಕಾವೇರಿ ನೀರು ತಮಿಳುನಾಡಿಗೆ ಹರಿಸುವುದನ್ನು ವಿರೋಧಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಅವರು ಈ ಕುರಿತು ಟ್ವೀಟ್‌ ಮಾಡಿದ್ದಾರೆ. ಹಲವು ವರುಷಗಳ ಅನುಭವವಿರುವ ನಾವೇ ಆಯ್ಕೆ ಮಾಡಿರುವ ನಮ್ಮ ಜನಪ್ರತಿನಿಧಿಗಳ ಮೇಲೆ ನಮಗೇ ನಂಬಿಕೆ ಇಲ್ಲವೇ? ನಾಳೆ ನೀರಿನ ಸಮಸ್ಯೆಯಾದರೆ ನಮ್ಮ ಜನಪ್ರತಿನಿಧಿಗಳೇ ಅದನ್ನು ಪರಿಹರಿಸಬೇಕಲ್ಲವೇ? ವರ್ಷಗಳಿಂದ ಅಂಕಿ ಅಂಶಗಳನ್ನು ನೀಡಿ ವಾದಿಸುತ್ತಿರುವ ಕಾನೂನು ತಜ್ಞರಿಗಿಂತ ನಮಗೆ ತಿಳುವಳಿಕೆ ಇದೆಯೇ? ಆತಂಕ ಏಕೆ? ಎಂದಿದ್ದಾರೆ.

Previous articleನೀರು ಬಿಡದಿದ್ದರೆ, ಸರ್ಕಾರವನ್ನೇ ವಜಾ ಮಾಡಬಹುದೇ?
Next articleಕುಂಚತಂತ್ರ