ಕಾಡಾನೆಗಳ ಹಿಂಡು: ಕೆಲವು ಶಾಲೆಗಳಿಗೆ ರಜೆ ಘೋಷಣೆ

0
16

ಚಿಕ್ಕಮಗಳೂರು: ನಗರದ ಸಮೀಪದ ಕದ್ರಿಮಿದ್ರಿ, ಮೂಗ್ತಿ ಹಳ್ಳಿ ಭಾಗದಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದ್ದು ಮುಂಜಾಗೃತ ಕ್ರಮವಾಗಿ ಈ ಭಾಗದ ಕೆಲವು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಬೇಲೂರು ಮಾರ್ಗವಾಗಿ ಆಗಮಿಸಿರುವ ಕಾಡಾನೆಗಳ ಹಿಂದು ಕಳೆದ ಎರಡು ಮೂರು ದಿನಗಳ ಹಿಂದೆ ಕೆ.ಆರ್.ಪೇಟೆ, ಮಾವಿನಕೆರೆ ಭಾಗದಲ್ಲಿ ಆನೆಗಳ ಹಿಂಡು ಕಾಣಿಸಿಕೊಂಡಿತ್ತು. ಈ ಆನೆಗಳ ಗುಂಪು ಸೋಮವಾರ ಬೆಳಿಗ್ಗೆ ನಗರ ಸಮೀಪದ ಕದ್ರಿಮಿದ್ರಿ ಭಾಗದಲ್ಲಿ ಮೂವತ್ತ ರಿಂದ ನಾಲವತ್ತು ಆನೆಗಳ ಹಿಂಡು ಕಾಣಿಸಿಕೊಂಡಿವೆ ಈ ಭಾಗದಲ್ಲಿ ಶಾಲಾ ಕಾಲೇಜುಗಳ ಹೆಚ್ಚಿನ ಸಂಖ್ಯೆಯಲ್ಲಿದ್ದು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ.ರವೀಶ್ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದಾರೆ.
ಕಾಡಾನೆಗಳ ಹಿಂಡು ಸುತ್ತಮು ತ್ತಲ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿವೆ. ಸ್ಥಳದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮೊಕ್ಕಂ ಹೂಡಿದ್ದು ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯ ನಡೆಸಲಾಗು ತ್ತಿದೆ.ಸುರಕ್ಷತೆ ದೃಷ್ಟಿಯಿಂದ ಈ ಭಾಗದಲ್ಲಿ ಜನರು ಸಂಚರಿಸ ದಂತೆ ಎಚ್ಚರಿಕೆ ನೀಡಿದ್ದಾರೆ.
ಬರಗಾಲದಿಂದ ರೈತರು ಈಗಾಗಲೇ ತತ್ತರಿಸಿ ಹೋಗಿ ದ್ದಾರೆ. ಇದರ ನಡುವೆ ಕಾಡಾನೆ ಗಳ ಹಿಂಡು ಪದೇ ಪದೇ ಜಮೀನುಗಳಿಗೆ ನುಗ್ಗಿ ಬೆಳೆ ಹಾಳು ಮಾಡುತ್ತಿರುವುದು ಇಲ್ಲಿನ ಜನರಿಗೆ ತಲೆನೋವಾಗಿದೆ.

Previous article‘‘ಪರಿಹಾರ ಕೊಡಿ ಕುರ್ಚಿ ಬಿಡಿ’’ ಎಂಬ ಹೋರಾಟದ ನಾಟಕ
Next articleಗ್ಯಾರಂಟಿ ಯೋಜನೆಗಳ ಅನುಷ್ಠಾನ : ಶ್ವೇತಪತ್ರ ಹೊರಡಿಸಲು ಸರ್ಕಾರಕ್ಕೆ ಒತ್ತಾಯ