ಬೆಂಗಳೂರು: ದೇಶದ ಜನ ಕಾಂಗ್ರೆಸ್ ಪಕ್ಷಕ್ಕೆ ಕಪಾಳಮೋಕ್ಷ ಮಾಡಿದ್ದಾರೆ. ಆದರೂ ಪಾಠ ಕಲಿಯದ ಕಾಂಗ್ರೆಸ್‌ಗೆ ಈ ಬಾರಿ ಶಾಶ್ವತವಾದ ಮೋಕ್ಷ ಕಾಣಿಸುವುದು ಕಟ್ಟಿಟ್ಟ ಬುತ್ತಿ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹೇಳಿಕೆ ಹಾಕಿರುವ ಅಶೋಕ್, ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಸಂಸ್ಕೃತಿ ನೋಡಿ. ಮೋದಿ ಮೋದಿ ಅನ್ನುವ ಯುವಕರ ಕಪಾಳಕ್ಕೆ ಹೊಡೀಬೇಕಂತೆ. ೨೦೧೪ ಮತ್ತು ೨೦೧೯ರಲ್ಲಿ ದೇಶದ ಜನರು ಕಾಂಗ್ರೆಸ್ ಪಕ್ಷಕ್ಕೆ ಕಪಾಳಮೋಕ್ಷ ಮಾಡಿದ್ದಾರೆ. ಆದರೂ ಕಾಂಗ್ರೆಸ್ ಇನ್ನು ಪಾಠ ಕಲಿತಿಲ್ಲ ಎಂದಿದ್ದಾರೆ.
ಚುನಾವಣೆ ಬಂದಾಗಲೆಲ್ಲಾ ಸೋಲಿನ ಹತಾಶೆಯಿಂದ ಪ್ರಧಾನಿ ಮೋದಿ ಅವರ ವಿರುದ್ಧ ನಾಲಿಗೆ ಹರಿಯಬಿಡುವುದು ಕಾಂಗ್ರೆಸ್ ನಾಯಕರಿಗೆ ಚಾಳಿ ಆಗಿಬಿಟ್ಟಿದೆ ಎಂದೂ ಅಶೋಕ್ ಟೀಕಿಸಿದ್ದಾರೆ.