ಕರ್ನಾಟಕ ವಿವಿ ಸಿಬ್ಬಂದಿ ಪಿಂಚಣಿಗೆ ೧೮ ಕೋಟಿ ರೂ ಹೆಚ್ಚುವರಿ ಅನುದಾನ: ಅಶ್ವತ್ಥ ನಾರಾಯಣ

0
13
KUD

ಬೆಂಗಳೂರು: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಿಬ್ಬಂದಿ ವರ್ಗದ ೨೦೨೨-೨೩ನೇ ಸಾಲಿನ ಪಿಂಚಣಿಗಾಗಿ ೧೮.೧೨ ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ಒದಗಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯವು ಆಂತರಿಕ ಸಂಪನ್ಮೂಲಗಳಿಂದಲೇ ಸಾಕಷ್ಟು ಹಣವನ್ನು ಕ್ರೊಢೀಕರಿಸಿದೆ. ಎದುರಾಗಿದ್ದ ಅಲ್ಪ ಪ್ರಮಾಣದ ಕೊರತೆಯನ್ನು ಹೆಚ್ಚುವರಿ ಅನುದಾನದ ಮೂಲಕ ಬಗೆಹರಿಸಲಾಗಿದೆ ಎಂದಿದ್ದಾರೆ. ಈ ಹಣವನ್ನು ಪಿಂಚಣಿಗೆ ಅಲ್ಲದೆ ಬೇರೆ ಉದ್ದೇಶಗಳಿಗಾಗಿ ಬಳಸುವಂತಿಲ್ಲ. ಜತೆಗೆ, ಖರ್ಚುವೆಚ್ಚಗಳ ವಿವರಗಳನ್ನು ವಿ.ವಿ.ಯ ಜಾಲತಾಣದಲ್ಲಿ ನಮೂದಿಸಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Previous articleಶ್ರೀಸುಬುಧೇಂದ್ರ ತೀರ್ಥ ಪಾದಂಗಳವರ 10ನೇ ಚಾತುರ್ಮಾಸ್ಯ ಸಂಪನ್ನ
Next articleಡಾ. ಪ್ರಭಾಕರ ಕೋರೆಗೆ ರಾಷ್ಟ್ರಮಟ್ಟದ ಶ್ರೀ ವೀರಭದ್ರೇಶ್ವರ ಪ್ರಶಸ್ತಿ