ಕದನ ವಿರಾಮ ಉಲ್ಲಂಘಿಸಿದರೆ ಯುದ್ಧಕ್ಕೆ ತಯಾರು ಮಾಡಿ

ಮೈಸೂರು: ಕದನ ವಿರಾಮ ಉಲ್ಲಂಘನೆ ಮಾಡಿದರೆ ಯುದ್ಧಕ್ಕೆ ತಯಾರು ಮಾಡಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್​ ಹೇಳಿದರು.
ಕದನ ವಿರಾಮಕ್ಕೆ ಅಮೆರಿಕ ಮಧ್ಯಸ್ಥಿಕೆ ವಹಿಸಿ ಶಾಂತಿ ನೆಲೆಸಲು ಪ್ರಯತ್ನ ಮಾಡಿತ್ತು. ಆದರೂ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ. ಉಲ್ಲಂಘನೆ ಮಾಡಿದರೆ ಯುದ್ಧಕ್ಕೆ ತಯಾರು ಮಾಡಬೇಕು ಎಂದರು.
ಈಗಾಗಲೇ ನಮ್ಮ ಭಾರತೀಯ ಸೇನೆ ಪಾಕಿಸ್ತಾನಕ್ಕೆ ದಿಟ್ಟ ಪ್ರತ್ಯುತ್ತರ ಕೊಡುತ್ತಿದೆ. ನಮ್ಮ ಸೈನಿಕರು, ಕೇಂದ್ರ ಸರ್ಕಾರಕ್ಕೆ ಅಭಿನಂದಿಸುತ್ತೇನೆ. ಪ್ರತಿಯೊಬ್ಬರೂ ದೇವರ ಜೊತೆಗೆ ಯೋಧರನ್ನೂ ನೆನಪಿಸಿಕೊಳ್ಳಿ ಎಂದರು.