ಉಗ್ರನ ಜತೆ ನಂಟು: ಭಟ್ಕಳ ಮಹಿಳೆ ವಿಚಾರಣೆ

0
8

ಭಟ್ಕಳ: ಮುಂಬೈನಲ್ಲಿ ಬಂಧಿತನಾಗಿರುವ ಉಗ್ರನೋರ್ವನ ಜೊತೆ ನಂಟು ಹೊಂದಿರುವ ಆರೋಪದ ಮೇರೆಗೆ ಭಟ್ಕಳದ ಮಹಿಳೆಯನ್ನು ಮುಂಬೈ ಎಟಿಎಸ್ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.
ಮಹಿಳೆಯ ಮನೆಯ ಮೇಲೆ ಬುಧವಾರ ರಾತ್ರಿ ದಾಳಿ ನಡೆಸಿದ ತಂಡ ಆಕೆಯನ್ನು ವಶಕ್ಕೆ ಪಡೆದು ಗುರುವಾರ ಭಟ್ಕಳದಲ್ಲಿಯೇ ವಿಚಾರಣೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಈ ಮಹಿಳೆಯನ್ನು ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಆಜಾದ್ ನಗರದ ನಿವಾಸಿ ಆಯಿಷಾ ಎಂದು ಗುರುತಿಸಲಾಗಿದೆ.
ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ ಜೊತೆ ನಂಟು ಹೊಂದಿರುವ ಮಹಾರಾಷ್ಟ್ರ ನಾಸಿಕ್ ಮೂಲದ ಯುವಕನನ್ನು ಮುಂಬೈ ಎಟಿಎಸ್ ತಂಡ ಬಂಧಿಸಿತ್ತು. ಆತನ ಜೊತೆ ಸಂಪರ್ಕದಲ್ಲಿದ್ದ ಮುಂಬೈನ ಓರ್ವ ಮಹಿಳೆಯ ಸಂಪರ್ಕದಲ್ಲಿ ಈ ಭಟ್ಕಳದ ಮಹಿಳೆ ಇದ್ದಳು ಎನ್ನಲಾಗಿದೆ.
ಈಕೆಯ ಪತಿ ಮರಣಹೊಂದಿದ್ದು, ತಂದೆ ತಾಯಿ ಮಕ್ಕಳ ಜೊತೆ ವಾಸವಾಗಿದ್ದಾಳೆ. ಸ್ಥಳೀಯ ಮದರಸಾದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಈಕೆ ಹೆಣ್ಣು ಮಕ್ಕಳಿಗೆ ಧರ್ಮಶಿಕ್ಷಣ ಬೋಧಿಸುತ್ತಿದ್ದಳು. ಬಂಧಿತ ಉಗ್ರನಿಗೆ ಹಣ ವರ್ಗಾವಣೆ ಮಾಡಿರುವ ಮತ್ತು ನೇರ ಸಂಪರ್ಕ ಹೊಂದಿರುವ ಕುರಿತು ತನಿಖೆ ನಡೆಸಲಾಗುತ್ತಿದೆ. ಆಯಿಷಾಳ ಮನೆಯನ್ನು ಶೋಧಿಸಿರುವ ತಂಡ ಮೊಬೈಲ್ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

Previous articleತಡಕೋಡ ಪ್ರಕರಣ ೮ ಹಿಂದೂ ಯುವಕರು ವಶಕ್ಕೆ
Next articleಸಿಎಂಗೆ ೨೧೦೦ ರೂ. ಮೊತ್ತದ ಚೆಕ್ ಕಳುಹಿಸಿದ ರೈತರು