ಇಸ್ರೇಲ್ ಮಹಿಳೆ ತವರಿಗೆ

0
21

ಕೊಪ್ಪಳ: ಸಾಮೂಹಿಕ ಅತ್ಯಾಚಾರಕ್ಕೊಳಗಾದ ಇಸ್ರೇಲ್ ಮಹಿಳೆಯು ವಿಮಾನದ ಮೂಲಕ ತವರಿಗೆ ಮರಳಿದ ಮಾಹಿತಿ ಬಂದಿದೆ.
ಫೆ. 6ರಂದು ರಾತ್ರಿ ಗಂಗಾವತಿ ತಾಲೂಕಿನ ಸಣಾಪುರ ಗ್ರಾಮದ ನಿರ್ಜನ ಪ್ರದೇಶದಲ್ಲಿ ಇಸ್ರೇಲ್ ಮಹಿಳೆಯ ಮೇಲೆ ಅತ್ಯಾಚಾರ ನಡೆದಿತ್ತು. ಅಲ್ಲದೇ ಆರೋಪಿಗಳು ಆಕೆಯ ಜತೆಗಿದ್ದವರನ್ನು ಸಣಾಪುರ ಕೆರೆಯಲ್ಲಿ ತಳ್ಳಿದ್ದರು. ಎಲ್ಲರೂ ಹೊರಬಂದರು. ಆದರೆ ಈಕೆಯ ಜತೆಗಿದ್ದ ಓರಿಸ್ಸಾ ಮೂಲದ ಬಿಬಾಷ ಎನ್ನುವ ವ್ಯಕ್ತಿಯು ಮೃತಪಟ್ಟಿದ್ದನು.
ಗಂಗಾವತಿಯ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆಯು ಚಿಕಿತ್ಸೆ ಪಡೆಯುತ್ತಿದ್ದಳು. ಸೋಮವಾರ ಚೇತರಿಸಿಕೊಂಡಿದ್ದು, ಬಳಿಕ ಬೆಂಗಳೂರಿಗೆ ತೆರಳಿದ್ದಾಳೆ. ಅಲ್ಲಿಂದ ವಿಮಾನದ ಮೂಲಕ ಇಸ್ರೇಲ್ ದೇಶಕ್ಕೆ ತೆರಳಿದ್ದಾಳೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈಗ ಮಹಿಳೆಯು ಇಸ್ರೇಲ್‌ಗೆ ತೆರಳಿದ್ದು, ತನಿಖೆ ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ. ತನಿಖೆಗೆ ಅವಶ್ಯವಿದ್ದರೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪಡೆಯುತ್ತೇವೆ. ಮಹಿಳೆಯಿಂದ ಹೇಳಿಕೆ ಪಡೆದಿದ್ದೇವೆ ಎಂದು ಎಸ್ಪಿ ಡಾ. ರಾಮ್ ಎಲ್. ಅರಸಿದ್ಧಿ ತಿಳಿಸಿದ್ದಾರೆ.

Previous articleಜಮೀನಿಗಾಗಿ ಮಾರಾಮಾರಿ: ಇಬ್ಬರ ಮೇಲೆ ಹಲ್ಲೆ
Next articleಪಾಕ್‌ನಲ್ಲಿ 400 ಜನರಿದ್ದ ರೈಲು ಉಗ್ರರಿಂದ ಹೈಜಾಕ್!