ಆಳಂದ ತಹಶೀಲ್ದಾರ್‌, ಆರ್.ಐ ಲೋಕಾ ಬಲೆಗೆ

0
11

ಕಲಬುರಗಿ: ಕೃಷಿಯೇತರ ನಿವೇಶನದ ಎನ್ಓಸಿ ಕೊಡಲು ಜಿಲ್ಲಾಧಿಕಾರಿಗೆ ಶಿಫಾರಸು ಮಾಡಲು 12 ಸಾವಿರ ರೂ. ಡಿಮ್ಯಾಂಡ್ ಮಾಡಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಆಳಂದ ತಾಲೂಕು ತಹಶಿಲ್ದಾರರ ಮತ್ತು ಆರ್.ಐ ಇಬ್ಬರು ಲೋಕಾಯುಕ್ತರ ಬಲೆಗೆ ಬಿದ್ದಿರುವ ಘಟನೆ ಗುರುವಾರ ನಡೆದಿದೆ.
ಆಳಂದ ತಾಲ್ಲೂಕು ತಹಶೀಲ್ದಾರ್ ಯಲ್ಲಪ್ಪ ಸುಬೇದಾರ್, ಆರ್ ಐ ರಾಜಶೇಖರ್ ಸರಸಂಬಿ ಲೋಕಾಯುಕ್ತರ ಬಲೆಗೆ ಬಿದ್ದ ಅಧಿಕಾರಿಗಳು. ಕಂದಾಯ ಅಧಿಕಾರಿ ರಾಜಶೇಖರ್ ಮೂಲಕ 12 ಸಾವಿರ ರೂ ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದಿದಾರೆ.
ಮೆಹಬೂಬ್ ಪಟೇಲ್ ಲಂಬೇವಾಡಿ ಎಂಬಾತರಿಗೆ ಎನ್ಎ ಎನ್ಓಸಿ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದರು. ಈ ಲಂಚದ ಆರೋಪ ಆಧರಿಸಿ ಲೋಕಾಯುಕ್ತ ಲೋಕಾಯುಕ್ತ ಎಸ್ಪಿ ಕರ್ನೂಲ್ ಮಾರ್ಗದರ್ಶನದಲ್ಲಿ ಸಿಪಿಐಗಳಾದ ನಾನಾಗೌಡ, ದ್ರುವತಾರೆ, ಅಕ್ಕಮಹಾದೇವಿ ನೇತೃತ್ವದಲ್ಲಿ ಗುರುವಾರ ಸಂಜೆ ೫: ೪೫ ಗಂಟೆ ಸುಮಾರಿಗೆ ತಹಶೀಲ್ ಕಚೇರಿ ಮೇಲೆ ದಾಳಿ ನಡೆಸಿ ತಹಶಿಲ್ದಾರ್ ಯಲ್ಲಪ್ಪ ಸುಬೇದಾರ್, ಆರ್ ಐ ರಾಜಶೇಖರ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Previous articleಆಕಾಶದೆತ್ತರಕ್ಕೆ ಸುದೀಪ್‌ ಹೆಸರು‌
Next articleವಿಮಾನ ಪ್ರಯಾಣಕ್ಕೆ 500 ರೂ. ರಿಯಾಯತಿ