ಆಭರಣದ ಬ್ಯಾಗ:  ಪ್ರಯಾಣಿಕರಿಗೆ ತಲುಪಿಸಿದ ಸಾರಿಗೆ ನಿರ್ವಾಹಕ, ಚಾಲಕ

0
34

ಕುಂದಗೋಳ : ಪ್ರಯಾಣಿಕರೊಬ್ಬರು ಸಾರಿಗೆ ಬಸ್ ಒಳಗೆ ಮರೆತು ಹೋಗಿದ್ದ ನಗದು, ಬೆಳ್ಳಿ ಆಭರಣ ಇರುವ ಬ್ಯಾಗನ್ನು ಪುನಃ ಪ್ರಯಾಣಿಕರಿಗೆ ತಲುಪಿಸುವ ಮೂಲಕ ಸಾರಿಗೆ ನಿರ್ವಾಹಕ ಮತ್ತು ಚಾಲಕ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ನವಲಗುಂದ ತಾಲೂಕಿನ ಹಣಸಿ ಗ್ರಾಮದ ಕಮಲಾ ಎಂಬ ಮಹಿಳೆ ಕುಂದಗೋಳ ತಾಲೂಕಿನ ದೇವನೂರು ಗ್ರಾಮಕ್ಕೆ ತೆರಳಲು ಹುಬ್ಬಳ್ಳಿಯಿಂದ ಕುಂದಗೋಳ ಮಾರ್ಗವಾಗಿ ಹೊರಡುವ ಯರಗುಪ್ಪಿ ಬಸ್’ನಲ್ಲಿ ಒಳಗೆ ಪ್ರಯಾಣ ಬೆಳೆಸಿದ್ದರು.
ಪ್ರಯಾಣ ಮದ್ಯೆ ಕುಂದಗೋಳ ದಲ್ಲಿ ಬಸ್’ನಿಂದ ಇಳಿದಾಗ ಬ್ಯಾಗ್ ಮರೆತಿದ್ದರು, ಈ ವೇಳೆ ಪ್ರಯಾಣಿಕರು ಬಿಟ್ಟು ಹೋದ ಬ್ಯಾಗನ್ನು ತೆಗೆದು ಪುನಃ 6 ಗಂಟೆಗೆ ಅದೇ ಕುಂದಗೋಳ ಬಸ್ ನಿಲ್ದಾಣದಲ್ಲಿ ಮಹಿಳೆಗೆ ನಿರ್ವಾಹಕ ಶರೀಪಸಾಬ್ ನದಾಫ್ ಚಾಲಕ ಬಸವಂತಪ್ಪ ಮಂಟೂರು ನೀಡಿ ಜನರ ಪ್ರಸಂಶೆಗೆ ಪಾತ್ರರಾದರು.

Previous articleಭಾಗವತ್ ಮಾತಿಗೆ ಕಿವಿಗೊಡದ ಮೋದಿ
Next articleಶಿಕ್ಷಣಕ್ಕೆ ಗೃಹಲಕ್ಷ್ಮಿ ಯೋಜನೆಯ ಆಸರೆ