ಆಕಾಶದೆತ್ತರಕ್ಕೆ ಸುದೀಪ್‌ ಹೆಸರು‌

0
21

ಬೆಂಗಳೂರು: ನಟ ಕಿಚ್ಚ ಸುದೀಪ್ ಅವರು ಸೆಪ್ಟೆಂಬರ್ 2ರಂದು 50ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಅವರ ಹುಟ್ಟು ಹಬ್ಬಕ್ಕೆ ವಿಶೇಷ ಉಡುಗೊರೆಯೊಂದು ಸಜ್ಜುಗೊಂಡಿದ್ದು ಆಕಾಶದಲ್ಲಿನ ನಕ್ಷತ್ರವೊಂದಕ್ಕೆ ಕಿಚ್ಚ ಸುದೀಪ್​ ಅವರ ಹೆಸರನ್ನು ಇಡಲಾಗಿದೆ. ಅರಸು ಕ್ರಿಯೇಷನ್ಸ್ ಸುದೀಪ್ ಅವರ ಹೆಸರನ್ನು ನಕ್ಷತ್ರವೊಂದಕ್ಕೆ ನಾಮಕರಣ ಮಾಡಿದ್ದು, ಅಧಿಕೃತವಾಗಿ ನೋಂದಣಿ ಕೂಡ ಮಾಡಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರೀಶ್ ಅರಸು ಅವರು ವಿಷಯವನ್ನು ಹಂಚಿಕೊಂಡಿದ್ದಾರೆ. ಆಕಾಶದ ನಕ್ಷತ್ರಕ್ಕೆ ಕಿಚ್ಚ ಸುದೀಪ್ ಎಂದು ನಾಮಕರಣ ಮಾಡಿದ್ದಾರೆ. ಈ ಜಗತ್ತಿನಲ್ಲಿರುವ ರತ್ನಗಳಲ್ಲಿ ನೀನೇ ಅತ್ಯಮೂಲ್ಯ. ಇಂದು ನಕ್ಷತ್ರ ಹುಟ್ಟಿದ ದಿನವನ್ನು ನಾವು ಆಚರಿಸುತ್ತೇವೆ. ಆದರೆ ಆಕಾಶದಲ್ಲಿ ಅಲ್ಲ ಭೂಮಿಯಲ್ಲಿ ಎಂಬ ಅರ್ಥಪೂರ್ಣ ಸಂದೇಶದ ಮೂಲಕ ಕಿಚ್ಚನಿಗೆ ಅರಸು ಕ್ರಿಯೇಷನ್ಸ್ ಮನದುಂಬಿ ಶುಭಾಶಯ ಕೋರಿದೆ.

Previous articleಜನರ ಹಿತಾಸಕ್ತಿಯನ್ನು ರಕ್ಷಿಸದ ಕೇಂದ್ರ ಸರ್ಕಾರ
Next articleಆಳಂದ ತಹಶೀಲ್ದಾರ್‌, ಆರ್.ಐ ಲೋಕಾ ಬಲೆಗೆ