ಅಮೆಜಾನ್ ಮ್ಯಾನೇಜರ್‌ ಹತ್ಯೆ!

0
5

ನವದೆಹಲಿ: ಅಮೆಜಾನ್ ಕಂಪನಿಯ ಸೀನಿಯರ್ ಮ್ಯಾನೇಜರನ್ನು ಗುಂಡಿಟ್ಟು ಕೊಲೆಗೈದ ಘಟನೆ ನವದೆಹಲಿಯಲ್ಲಿ ನಡೆದಿದೆ. ಈ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ ಎನ್ನಲಾಗಿದೆ. ನವದೆಹಲಿಯ ಭಜನ್‍ಪುರ ಪ್ರದೇಶದಲ್ಲಿ ಈ ಹತ್ಯೆ ನಡೆದಿದೆ, ಮೃತದುರ್ದೈವಿಯನ್ನು ಭಜನ್‍ಪುರ ನಿವಾಸಿ ಹರ್‌ಪ್ರೀತ್ ಗಿಲ್ (36) ಎಂದು ಗುರುತಿಸಲಾಗಿದ್ದು, ಅಮೆಜಾನ್ ಕಂಪನಿಯಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಘಟನೆ ನಡೆದ ಕೂಡಲೇ ಗಿಲ್ ಅವರನ್ನು ಜಗ್ ಪ್ರವೇಶ್ ಚಂದ್ರ ಆಸ್ಪತ್ರೆಗೆ ದಾಖಲಾಯಿಸಿತಾದರೂ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

Previous articleಪಟಾಕಿ ಗೋದಾಮು ದುರಂತ ಸೂಕ್ತ ತನಿಖೆಯಾಗಲಿ
Next articleಪಟಾಕಿ ಗೋದಾಮಿನಲ್ಲಿ ಅಗ್ನಿ ಅವಘಡ: ಇಬ್ಬರು ಗಾಯಾಳು ಬೆಂಗಳೂರಿಗೆ ಶಿಪ್ಟ್