UPSC ಅಧ್ಯಕ್ಷರಾಗಿ ಮಾಜಿ ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ನೇಮಕ

0
44

ನವದೆಹಲಿ: ಮಾಜಿ ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಅವರನ್ನು ಯುಪಿಎಸ್‌ಸಿ ಅಧ್ಯಕ್ಷರನ್ನಾಗಿ ನೇಮಿಸಿ ಮಂಗಳವಾರ ಕೇಂದ್ರ ಸಿಬ್ಬಂದಿ ಸಚಿವಾಲಯ ಈ ಕುರಿತ ಆದೇಶ ಹೊರಡಿಸಿದೆ.
ಕಳೆದ ಎ.29 ರಂದು ಪ್ರೀತಿ ಸುಡಾನ್ ಅವರ ಅಧಿಕಾರಾವಧಿ ಪೂರ್ಣಗೊಂಡ ನಂತರ ಕೇಂದ್ರ ಲೋಕಸೇವಾ ಸೇವಾ ಆಯೋಗದ (ಯುಪಿಎಸ್‌ಸಿ) ಅಧ್ಯಕ್ಷರ ಹುದ್ದೆ ಖಾಲಿಯಿತ್ತು. ಅಜಯ್ ಕುಮಾ‌ರ್ ಅವರ ನೇಮಕಕ್ಕೆ ರಾಷ್ಟ್ರಪತಿ ದೌಪದಿ ಮುರ್ಮು ಅನುಮೋದನೆ ನೀಡಿದ್ದು ಮಂಗಳವಾರ ಕೇಂದ್ರ ಸಿಬ್ಬಂದಿ ಸಚಿವಾಲಯ ಈ ಕುರಿತ ಆದೇಶ ಹೊರಡಿಸಿದೆ, 1985ನೇ ತಂಡದ, ಕೇರಳ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದ ಅಜಯ್ ಕುಮಾರ್, 2019ರ ಆಗಸ್ಟ್ 23ರಿಂದ 2022ರ ಅಕ್ಟೋಬರ್ 31ರವರೆಗೂ ರಕ್ಷಣಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ, ಕೇಂದ್ರ ಲೋಕಸೇವಾ ಆಯೋಗದಲ್ಲಿ (ಯುಪಿಎಸ್‌ಸಿ) ಇಬ್ಬರು ಸದಸ್ಯರ ಸ್ಥಾನಗಳು ಖಾಲಿ ಇವೆ. ಯುಪಿಎಸ್‌ಸಿ ಅಧಿಕಾರ ಅವಧಿಯು ಆರು ವರ್ಷ ಕಾಲ ಅಥವಾ 65 ವರ್ಷ ಆಗುವವರೆಗೂ ಇರುತ್ತದೆ.

Previous articleಸುಪ್ರೀಂ ಕೋರ್ಟ್‌ನ ಸಿಜೆಐ ಆಗಿ ನ್ಯಾ.ಬಿ.ಆ‌ರ್. ಗವಾಯಿ ಪ್ರಮಾಣ ವಚನ ಸ್ವೀಕಾರ
Next articleಪಾಕ್​ ವಶದಲ್ಲಿದ್ದ BSF ಯೋಧ ಬಿಡುಗಡೆ