UPI ಪಾವತಿಗಳಿಗೆ ಜಿಎಸ್‌ಟಿ ಹಾಕಲಾಗುತ್ತಾ? ಕೇಂದ್ರದ ಸ್ಪಷ್ಟನೆ

0
100

ನವದೆಹಲಿ: ಯುಪಿಐ ಪಾವತಿ 2000 ರೂಪಾಯಿಗಿಂತ ಮೇಲ್ಪಟ್ಟ ವಹಿವಾಟಿಗೆ ಜಿಎಸ್‌ಟಿ ಶುಲ್ಕ ವಿಧಿಸಲಾಗುತ್ತದೆ ಎಂದು ಸಾಮಾಜಿಕ ಜಾಲತಾಣಗಳು ಸೇರಿದಂತೆ ವಿವಿಧ ವೆಬ್‌ಸೈಟ್‌ಗಳಲ್ಲಿ ಆಗುತ್ತಿರುವ ಪ್ರಚಾರ ಕುರಿತಂತೇ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
2000 ರೂಪಾಯಿಗಿಂತ ಮೇಲ್ಪಟ್ಟ ಯುಪಿಐ ಪಾವತಿಗೆ ಜಿಎಸ್‌ಟಿ ಶುಲ್ಕ ಕುರಿತು ಹರಿದಾಡುತ್ತಿರುವ ಸುದ್ದಿ ಕುರಿತಂತೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರ ಇದೊಂದು ಸುಳ್ಳು ಸುದ್ದಿಯಾಗಿದ್ದು, ಯಾವುದೇ ಆಧಾರರಹಿತ ಮಾಹಿತಿಯನ್ನು ನಂಬಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಯುಪಿಐ ವಹಿವಾಟಿನ ಮೇಲೆ ಶುಲ್ಕ ವಿಧಿಸಲು ಸರ್ಕಾರ ನಿರ್ಧರಿಸಿಲ್ಲ. ಈ ಕುರಿತು ಯಾವುದೇ ಪ್ರಸ್ತಾವನೆಗಳು, ಆಲೋಚನೆಗಳು ಸರ್ಕಾರದ ಮುಂದಿಲ್ಲ. ಕೇಂದ್ರ ಸರ್ಕಾರ ಭಾರತದಲ್ಲಿ ಯುಪಿಐ ವಹಿವಾಟು ಹೆಚ್ಚಿಸಲು ಉತ್ತೇಜನ ನೀಡುತ್ತಿದೆ. ಹೀಗಾಗಿ ಈ ಕುರಿತು ಗೊಂದಲಕ್ಕೀಡಾಗುವ, ಆತಂಕ ಪಡುವ ಅವಶ್ಯಕತೆ ಇಲ್ಲ. ಯುಪಿಐ ಮೇಲೆ ಯಾವುದೇ ಶುಲ್ಕ ವಿಧಿಸುತ್ತಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲ ಹೇಳಿದೆ.

Previous articleರೈತ ಹೋರಾಟಗಾರರಿಗೆ ರೈಲ್ವೆ ಇಲಾಖೆಯಿಂದ ನೋಟಿಸ್
Next articleಜನಿವಾರ ತೆಗೆಸಿದ ಪ್ರಕರಣ: ಕೆಂಭಾವಿಯಲ್ಲಿ ಪ್ರತಿಭಟನೆ