Home ಸುದ್ದಿ ವಿದೇಶ ಥೈಲ್ಯಾಂಡ್ ಪ್ರವಾಸ: ಭಾರತೀಯರಿಗೆ ಮುನ್ನೆಚ್ಚರಿಕೆ ಕೊಟ್ಟ ರಾಯಭಾರ ಕಚೇರಿ

ಥೈಲ್ಯಾಂಡ್ ಪ್ರವಾಸ: ಭಾರತೀಯರಿಗೆ ಮುನ್ನೆಚ್ಚರಿಕೆ ಕೊಟ್ಟ ರಾಯಭಾರ ಕಚೇರಿ

0

ನವದೆಹಲಿ: ಭಾರತದಿಂದ ಹಲವಾರು ಜನರು ಥೈಲ್ಯಾಂಡ್ ಪ್ರವಾಸವನ್ನು ಕೈಗೊಳ್ಳುತ್ತಾರೆ. ಈಗ‌ ಪ್ರವಾಸಿಗರಿಗೆ ರಾಯಭಾರ ಕಚೇರಿ ಅಲರ್ಟ್‌ ಒಂದನ್ನು ನೀಡಿದ್ದು, ಥೈಲ್ಯಾಂಡ್-ಕಾಂಬೋಡಿಯಾ ಗಡಿ ಪ್ರದೇಶಗಳಿಗೆ ಪ್ರವಾಸ ಹೋಗಬೇಡಿ ಎಂದು ಮನವಿ ಮಾಡಿದೆ.

ಥೈಲ್ಯಾಂಡ್‌ ಹಾಗೂ ಕಾಂಬೋಡಿಯಾ ನಡುವೆ ಯುದ್ಧ ನಡೆಯುತ್ತಿದೆ. ಹಲವಾರು ಜನರು ಈಗಾಗಲೇ ಮೃತಪಟ್ಟಿದ್ದಾರೆ. ಆದ್ದರಿಂದ ಕಾಂಬೋಡಿಯಾ ರಾಯಭಾರ ಕಚೇರಿ ಪ್ರವಾಸ ಕೈಗೊಳ್ಳುವವರು ಮತ್ತು ದೇಶದಲ್ಲಿರುವ ಭಾರತೀಯರಿಗೆ ಎಚ್ಚರಿಕೆ ನೀಡಿದೆ.

ಎಚ್ಚರಿಕೆಯ ಸಂದೇಶದಲ್ಲಿ, ‘ಥೈಲ್ಯಾಂಡ್-ಕಾಂಬೋಡಿಯಾ ನಡುವಿನ ಸಂಘರ್ಷದ ಹಿನ್ನಲೆಯಲ್ಲಿ ಭಾರತೀಯ ನಾಗರೀಕರು ಗಡಿ ಭಾಗಕ್ಕೆ ಭೇಟಿ ನೀಡಬಾರದು’ ಎಂದು ಹೇಳಿದೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕಚೇರಿಗೆ ಕರೆ ಮಾಡಿ ಎಂದು ಮನವಿ ಮಾಡಿದೆ, ಸಹಾಯವಾಣಿ ಸಂಖ್ಯೆಯನ್ನು ನೀಡಿದೆ.

ಶುಕ್ರವಾರ ಥೈಲ್ಯಾಂಡ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪ್ರವಾಸಿಗರಿಗೆ, ಜನರಿಗೆ ಎಚ್ಚರಿಕೆಯನ್ನು ನೀಡಿತ್ತು. ಥೈಲ್ಯಾಂಡ್‌ನ 7 ಪ್ರಮುಖ ಪ್ರದೇಶಗಳಿಗೆ ಭೇಟಿ ನೀಡುವುದನ್ನು ಮುಂದೂಡಿ ಎಂದು ಸಲಹೆ ನೀಡಿತ್ತು.

ಥೈಲ್ಯಾಂಡ್‌ಗೆ ಹೋಗುವ ಪ್ರವಾಸಿಗರು TAT ನ್ಯೂಸ್ ರೂಮ್ ಸೇರಿದಂತೆ ಅಧಿಕೃತ ಸುದ್ದಿಗಳನ್ನು ಫಾಲೋ ಮಾಡಿ, ಗಡಿಯ ಸಮೀಪದ ಪ್ರದೇಶಗಳ ಭೇಟಿಯನ್ನು ಆದಷ್ಟು ಕಡಿಮೆ ಮಾಡಿ ಎಂದು ರಾಯಭಾರ ಕಚೇರಿ ತಿಳಿಸಿತ್ತು.

ಥೈಲ್ಯಾಂಡ್-ಕಾಂಬೋಡಿಯಾ ನಡುವೆ ಪ್ರಾಚೀನ ವಿಹಾರ ಮತ್ತು ತಾ ಮೊನ್ ಥಮ್ ದೇವಾಲಯಗಳ ಸುತ್ತಲಿನ 800 ಕಿ.ಮೀ.ಗಡಿ ಒತ್ತುವರಿ ವಿಚಾರದಲ್ಲಿ ವಿವಾದ ಉಂಟಾಗಿದ್ದು, ಘರ್ಷಣೆ ನಡೆಯುತ್ತಿದೆ.

2008ರಲ್ಲಿ ಯುನೆಸ್ಕೋ ಈ ದೇವಾಲಯವನ್ನು ವಿಶ್ವ ಪರಂಪರೆಯ ತಾಣ ಎಂದು ನೋಂದಣಿ ಮಾಡಿಸಿತ್ತು. ಆಗ ಉದ್ವಿಗ್ನತೆ ಹೆಚ್ಚಾಗಿತ್ತು. 2011ರಲ್ಲಿ ನಡೆದ ಗಲಭೆ ಸಂದರ್ಭದಲ್ಲಿ 28 ಜನರು ಸಾವನ್ನಪ್ಪಿದ್ದರು.

ಥೈಲ್ಯಾಂಡ್ ಕಾಂಬೋಡಿಯಾದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ವಾಯುದಾಳಿಯನ್ನು ಮಾಡಿದೆ. ಇದಕ್ಕೆ ಪ್ರತಿಯಾಗಿ ಕಾಂಬೋಡಿಯಾ ಸಹ ರಾಕೆಟ್ ದಾಳಿಯನ್ನು ಮಾಡಿದೆ. ವಾಯುವ್ಯ ಕಾಂಬೋಡಿಯಾ ಪ್ರದೇಶದಲ್ಲಿ ಇರುವ ದೇವಾಲಯ ಈಗ ಸಂಘರ್ಷಕ್ಕೆ ಕಾರಣವಾಗಿದೆ.

ದಶಕಗಳಿಂದಲೂ ತಾ ಮೊನ್ ಥಮ್ ದೇವಾಲಯದ ವಿಚಾರಕ್ಕೆ ಘರ್ಷಣೆಗಳು ನಡೆಯುತ್ತಿವೆ. ಮೇ ತಿಂಗಳಿನಲ್ಲಿ ಗಡಿಯಲ್ಲಿ ಇದೇ ವಿಚಾರಕ್ಕೆ ಗುಂಡಿನ ಚಕಮಕಿ ನಡೆದಿತ್ತು. ಆಗ ಕಾಂಬೋಡಿಯಾದ ಸೈನಿಕ ಮೃತಪಟ್ಟಿದ್ದ.

ನಾವು ರಾಷ್ಟ್ರದ ಸಾರ್ವಭೌಮ ಪ್ರದೇಶವನ್ನು ರಕ್ಷಣೆ ಮಾಡಲು ನಿಯೋಜಿಸಲಾದ ಪಡೆಗಳ ಮೇಲೆ ಕಾಂಬೋಡಿಯನ್ ಸೇನೆ ದಾಳಿ ಮಾಡಿದೆ. ಈ ಸಶಸ್ತ್ರದಾಳಿಯನ್ನು ನಾವು ಖಂಡಿಸುತ್ತೇವೆ. ಕಾಂಬೋಡಿಯಾ ಸಾಮ್ರಾಜ್ಯದ ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘನೆ ಮಾಡಿದೆ ಎಂದು ಥೈಲ್ಯಾಂಡ್ ಸೇನಾಧಿಕಾರಿ ಹೇಳಿದ್ದಾರೆ.

ಥೈಲ್ಯಾಂಡ್-ಕಾಂಬೋಡಿಯಾ ಕದನದ ಹಿನ್ನಲೆಯಲ್ಲಿ ಗಡಿ ಪ್ರದೇಶದ ಸುಮಾರು 1.8 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ. 7 ಪ್ರಾಂತ್ಯಗಳು ಯುದ್ಧಪೀಡಿತವಾಗಿದ್ದು, ಅಲ್ಲಿಗೆ ಯಾರೂ ಪ್ರವಾಸ ಕೈಗೊಳ್ಳಬೇಡಿ ಎಂದು ವಿವಿಧ ದೇಶಗಳು ಈಗಾಗಲೇ ಎಚ್ಚರಿಕೆಯನ್ನು ನೀಡಿವೆ.

ಅಚ್ಚರಿಯ ವಿಷಯ ಎಂದರೆ ಥೈಲ್ಯಾಂಡ್-ಕಾಂಬೋಡಿಯಾ ಕದನಕ್ಕೆ ಕಾರಣವಾಗಿರುವುದು ಶಿವನ ದೇವಾಲಯ. ಕಾಂಬೋಡಿಯಾದ ಡೊಂಗ್ರಕ್ ಪರ್ವತ ಶ್ರೇಣಿಯಲ್ಲಿ 525 ಮೀಟರ್ ಎತ್ತರದಲ್ಲಿರುವ ಈ ದೇವಾಲಯ ಸುಮಾರು 900 ವರ್ಷಗಳಷ್ಟು ಹಳೆಯದು. ಇದನ್ನು ಖೇಮರ್ ಸಾಮಾಜ್ಯದ ಅವಧಿಯಲ್ಲಿ ನಿರ್ಮಾಣ ಮಾಡಲಾಗಿದೆ.

ಇದು ಕಾಂಬೋಡಿಯನ್ನರು ಮಾತ್ರವಲ್ಲ ಥೈಸ್‌ನವರಿಗೂ ಪವಿತ್ರ ಸ್ಥಳವಾಗಿದೆ. ದಶಕಗಳ ಕಾಲದಿಂದ ದೇವಾಲಯದ ವಿಚಾರಕ್ಕೆ ಎರಡೂ ದೇಶಗಳ ನಡುವೆ ಸಂಘರ್ಷವಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version