Home ಸಿನಿ ಮಿಲ್ಸ್ ವಾರಾಂತ್ಯದ OTT ಅಪ್‌ಡೇಟ್: ವಿಕೇಂಡ್‌ನಲ್ಲಿ ನೋಡಬೇಕಾದ ಸಿನಿಮಾ ಪಟ್ಟಿ

ವಾರಾಂತ್ಯದ OTT ಅಪ್‌ಡೇಟ್: ವಿಕೇಂಡ್‌ನಲ್ಲಿ ನೋಡಬೇಕಾದ ಸಿನಿಮಾ ಪಟ್ಟಿ

0

ಈ ವಾರಾಂತ್ಯದಲ್ಲಿ ಒಟಿಟಿ ಪ್ರಿಯರಿಗೆ ಮನರಂಜನೆಯ ಮಹಾಪುರವೇ ಸಿಗಲಿದೆ. ಪ್ರಸಿದ್ದ OTT ತಾಣಗಳಾದ Z5, Amazon Prime Video, SonyLIV ಮತ್ತು Netflix ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಹಲವಾರು ಹೊಸ ಚಲನಚಿತ್ರಗಳು ಬಿಡುಗಡೆಗೊಂಡಿದೆ. ಯಾವ ಸಿನಿಮಾಗಳನ್ನು ಈ ವಾರ ಒಟಿಟಿಯಲ್ಲಿ ನೋಡಬಹುದು ಇಲ್ಲಿದೆ ನೋಡಿ ಪಟ್ಟಿ.

ಬಾಲಿವುಡ್​ ನಟ ಆಮಿರ್ ಖಾನ್ ನಿರ್ಮಾಣದ ಬಹು ನೀರಿಕ್ಷಿತ ಚಿತ್ರ ‘ಸಿತಾರೆ ಜಮೀನ್ ಪರ್’ ಜೂನ್ 20 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್​ನಲ್ಲಿ ಸುಮಾರು 300 ಕೋಟಿ ರೂಪಾಯಿ ಹಣಗಳಿಸಿತ್ತು. ಈ ಸಿನಿಮಾದ ಡಿಜಿಟಲ್ ಸ್ಟ್ರೀಮಿಂಗ್‌ಗಾಗಿ OTT ಹಕ್ಕು ಖರೀದಿಗೆ ಒಟಿಟಿ ಸಂಸ್ಥೆಗಳು ಕೋಟ್ಯಂತರ ರೂಪಾಯಿ ಆಫರ್ ಸಹ ನೀಡಿದ್ದವು.

ಆಮಿರ್ ಖಾನ್ ಅವುಗಳನ್ನೆಲ್ಲ ಪಕ್ಕಕ್ಕೆ ತಳ್ಳಿದ್ದರು. ಆಗಸ್ಟ್ 1 ರಂದು ಯೂಟ್ಯೂಬ್​​ನಲ್ಲಿ ಸಿನಿಮಾ ಬಿಡುಗಡೆ ಮಾಡಿದ್ದಾರೆ. ಕೇವಲ 100 ರೂಪಾಯಿ ಹಣ ನೀಡಿ ಯೂಟ್ಯೂಬ್​​ನಲ್ಲಿ ಈ ಚಿತ್ರ ವಿಕ್ಷಣೆ ಮಾಡಬಹುದಾಗಿದೆ. ಚಿತ್ರದಲ್ಲಿ ಆಮಿರ್ ಖಾನ್ ಬಾಸ್ಕೆಟ್​ಬಾಲ್ ಕೋಚ್ ಪಾತ್ರದಲ್ಲಿ ನಟಿಸಿದ್ದು, ಜೆನಿಲಿಯಾ ಡಿಸೋಜಾ ನಾಯಕಿ.

ಅಮೆಜಾನ್ ಪ್ರೈಮ್‌ನಲ್ಲಿ 3BHK ಚಿತ್ರವು ಆಗಸ್ಟ್‌ 1ಕ್ಕೆ ಬಿಡುಗಡೆಯಾಗಿದೆ. ಚಿತ್ರಮಂದಿರಗಳಲ್ಲಿ ಈ ಚಿತ್ರವು ಜುಲೈ 4 ರಂದು ತಮಿಳು ಹಾಗೂ ತೆಲಗು ಭಾಷೆಗಳಲ್ಲಿ ಬಿಡುಗಡೆಯಾಗಿ ಸದ್ದು ಮಾಡಿತ್ತು. ಚಿತ್ರದ ಕಥಾನಕವು ಮಧ್ಯಮ ವರ್ಗವು ಒಂದು ಮನೆಯನ್ನು ಖರೀದಿಸಲು ಹೆಣಗಾಡುವ ಜೀವನದ ಕಥೆಯಾಗಿದ್ದು, ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಈ ಚಿತ್ರದಲ್ಲಿ ಶರತ್‌ಕುಮಾರ್ ಅಭಿನಯವು ಅಭಿಮಾನಿಗಳ ಗಮನ ಸೆಳೆದಿತ್ತು. ತನ್ನ ಕನಸನ್ನು ಬೆನ್ನಟ್ಟಲು ಹೆಣಗಾಡುವ ತಂದೆ, ಅವನಿಗೆ ಬೆಂಬಲ ನೀಡುವ ಹೆಂಡತಿ, ಮಗಳು ಮತ್ತು ಮಗನ ವಾಸ್ತವಿಕ ಕಥೆಯು ಅಭಿಮಾನಿಗಳ ಮನ ಗೆದ್ದಿತ್ತು.

ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್ ನಟನೆಯ ‘ಹೌಸ್‌ಫುಲ್ 5’ ಚಿತ್ರ ಬಿಡುಗಡೆಯಾಗದೆ. ಹೌಸ್‌ಫುಲ್ ಸರಣಿ ಚಿತ್ರದ ಮೂಲಕ ಹಾಸ್ಯದ ರಸದೌತಣ ನೀಡಿರುವ ಚಿತ್ರಗಳಲ್ಲಿ ಇದು ಒಂದಾಗಿದೆ. ಜೂನ್ 6ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಕಲೆಕ್ಸನ್‌ ಮಾಡಿಕೊಂಡಿತ್ತು. ಈ ಚಿತ್ರವು ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿ ಲಭ್ಯ.

ನೆಟ್‌ಫ್ಲಿಕ್ಸ್‌ನಲ್ಲಿ ‘ತಮ್ಮುಡು’ ಚಿತ್ರವು ಬಿಡುಗಡೆಯಾಗದೆ. ಚಿತ್ರವು ಜುಲೈ 4ರಂದು ಕನ್ನಡ ಸೇರಿದಂತೆ ತಮಿಳು, ಮಲೆಯಾಳಂ ಹಾಗೂ ತೆಲಗು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ವೇಣು ಶ್ರೀರಾಮ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್‌ನಲ್ಲಿ ಕನ್ನಡದ ಸುಂದರಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಲಯಾ, ವರ್ಷಾ ಬೊಲ್ಲಮ್ಮ, ಸೌರಭ್ ಸಚ್‌ದೇವ್ ಮತ್ತು ಇತರರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಪ್ರಸಿದ್ಧ ನಿರ್ಮಾಣ ಕಂಪನಿ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜ್ ಈ ಚಿತ್ರವನ್ನು ಸುಮಾರು 75 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version