TCS ವರ್ಲ್ಡ್ 10K: ಏಪ್ರಿಲ್ 27 ರಂದು ಬೆಳಿಗ್ಗೆ 3:30ಕ್ಕೆ ಮೆಟ್ರೋ ಸೇವೆ ಪ್ರಾರಂಭ

0
35

ಬೆಂಗಳೂರು: ಟಿಸಿಎಸ್ ವರ್ಲ್ಡ್ 10K – 2025 ಮ್ಯಾರಥಾನ್ನ 17ನೇ ಆವೃತ್ತಿಯಲ್ಲಿ ಸಾರ್ವಜನಿಕರಿಗೆ ಭಾಗವಹಿಸಲು ಅನುಕೂಲವಾಗುವಂತೆ, ಬಿಎಂಆರ್‌ಸಿಎಲ್ ದಿನಾಂಕ ಏಪ್ರಿಲ್ 27, 2025ರ ಭಾನುವಾರ ಬೆಳಿಗ್ಗೆ 3:30ಕ್ಕೆ ಮೆಟ್ರೋ ರೈಲು ಸೇವೆ ಪ್ರಾರಂಭವಾಗುತದೆ ಎಂದು
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಪ್ರಕಟಣೆಯಲ್ಲಿ ತಿಳಿಸಿದೆ. TCS ವರ್ಲ್ಡ್ 10K ರನ್ ಪ್ರಯುಕ್ತ ಮುಂಜಾನೆ ಮೆಟ್ರೋ ಟಿಸಿಎಸ್ ವರ್ಲ್ಡ್ 10ಕೆ – 2025 ಮ್ಯಾರಥಾನ್‌ 17ನೇ ಆವೃತ್ತಿಯಲ್ಲಿ ಸಾರ್ವಜನಿಕರಿಗೆ ಭಾಗವಹಿಸಲು ಅನುಕೂಲವಾಗುವಂತೆ, ಬಿಎಂಆರ್‌ಸಿಎಲ್ ದಿನಾಂಕ ಏಪ್ರಿಲ್ 27, 2025ರ ಭಾನುವಾರ ಬೆಳಿಗ್ಗೆ 3:30ಕ್ಕೆ ಮೆಟ್ರೋ ರೈಲು ಸೇವೆಯನ್ನು ಪ್ರಾರಂಭವಾಗಲಿದೆ. ಇದು ಸಾಮಾನ್ಯ ಸಮಯಕ್ಕಿಂತ ಮೂರುವರೆ ಗಂಟೆಗಳ ಮುಂಚೆಯೇ ಪ್ರಾರಂಭವಾಗುತದೆ. ಈ ವಿಸ್ತ್ರತ ಅವಧಿಯಲ್ಲಿ ನಾಲ್ಕು ಮೆಟ್ರೋ ಟರ್ಮಿನಲ್‌ಗಳು ಮತ್ತು ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ ನಿಲ್ದಾಣದಿಂದ ರೈಲುಗಳು 12 ನಿಮಿಷಗಳ ಆವರ್ತನದಲ್ಲಿ ಚಲಿಸುತ್ತವೆ.
ಇದೊಂದು ಸುಗಮ ಸಾರಿಗೆಯಾಗಿದ್ದು ಸಾರ್ವಜನಿಕರಿಗೆ ಸೇವೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ವರ್ಲ್ಡ್ ಪ್ರೀಮಿಯರ್ 10K ಓಟದಲ್ಲಿ ಭಾಗವಹಿಸಲು ಮೇಲಿನ ಸೌಲಭ್ಯವನ್ನು ಬಳಸಿಕೊಳ್ಳುವಂತೆ ವಿನಂತಿಸಿದೆ.

Previous articleಕಲಬುರಗಿಯಲ್ಲಿ ಪೊಲೀಸರಿಂದ ಫೈರಿಂಗ್
Next articleಬೆಳ್ಳಂಬೆಳಗ್ಗೆ ಹೆದ್ದಾರಿಯಲ್ಲಿ ಹೊತ್ತಿ ಉರಿದ ಖಾಸಗಿ ಬಸ್