SSLC ಪರೀಕ್ಷೆ-2 ವೇಳಾಪಟ್ಟಿ ಬಿಡುಗಡೆ

ಬೆಂಗಳೂರು: SSLC ಪರೀಕ್ಷೆ 2 ರ ವಿಷಯವಾರು ವೇಳಾಪಟ್ಟಿಯನ್ನು ಕೆಎಸ್‌ಇಎಬಿ ಮಂಡಲಿ ಬಿಡುಗಡೆ ಮಾಡಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ- 2 ಇದೇ ಮೇ 26 ರಿಂದ ಜೂನ್‌ 2ರ ವರೆಗೆ ನಡೆಯಲಿದ್ದು. ಅನುತ್ತೀರ್ಣರಾದವರು, ಫಲಿತಾಂಶ ವೃದ್ಧಿಸಿಕೊಳ್ಳಲು ಬಯಸುವವರು, ಖಾಸಗಿಯಾಗಿ ಪರೀಕ್ಷೆ ತೆಗೆದುಕೊಳ್ಳುವವರು ಮೇ 10ರ ಒಳಗೆ ನೋಂದಣಿ ಮಾಡಿಕೊಳ್ಳಬೇಕು. ಪರೀಕ್ಷೆ – 1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಇರುವುದಿಲ್ಲ. ಫಲಿತಾಂಶ ವೃದ್ಧಿಸಿಕೊಳ್ಳಲು ಬಯಸುವವರು ಶುಲ್ಕ ಪಾವತಿಸಬೇಕು ಎಂದು ತಿಳಿಸಿದೆ.

SSLC ಪರೀಕ್ಷೆ-2 ವೇಳಾಪಟ್ಟಿ:
26 ಮೇ 2025: ಪ್ರಥಮ ಭಾಷೆ (ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಸಂಸ್ಕೃತ).
27 ಮೇ 2025: ಗಣಿತ ಮತ್ತು ಸಮಾಜ ಶಾಸ್ತ್ರ.
28 ಮೇ 2025: ದ್ವಿತೀಯ ಭಾಷೆ (ಇಂಗ್ಲೀಷ್, ಕನ್ನಡ).
29 ಮೇ 2025: ಸಮಾಜ ವಿಜ್ಞಾನ.
30 ಮೇ 2025: ತೃತೀಯ ಭಾಷೆ (ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು) ಮತ್ತು ವೃತ್ತಿಪರ ವಿಷಯಗಳು (ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋಮೊಬೈಲ್, ಇತರೆ).
31 ಮೇ 2025: ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ.
2 ಜೂನ್ 2025: ಜೆಟಿಎಸ್ ವಿಷಯಗಳು (ಎಲೆಕ್ಟ್ರಿಕಲ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಅರ್ಥಶಾಸ್ತ್ರ).