ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮಕ್ಕೆ ಈ ಬಾರಿ ಒಂದು ವಿಶಿಷ್ಟ ಸಿಹಿತನ ಸೇರಿದೆ — ಆದರೆ ಅದು ಸಕ್ಕರೆ ಇಲ್ಲದ ಸಿಹಿತನ! ಡಯಾಬಿಟಿಸ್ (ಮಧುಮೇಹ) ಇರುವವರಿಗೂ ಹಬ್ಬದ ಸಿಹಿ ರುಚಿ ಸವಿಯಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ನಿ. (ಕೆಎಂಎಫ್) ತನ್ನ ಪ್ರಸಿದ್ಧ “ನಂದಿನಿ” ಬ್ರಾಂಡ್‌ನಲ್ಲಿ No Added Sugar ಸಿಹಿತಿಂಡಿಗಳನ್ನು ಬಿಡುಗಡೆ ಮಾಡಿದೆ.
“ಇಂದಿನ ಆರೋಗ್ಯ ಕಾಳಜಿಯ ಕಾಲದಲ್ಲಿ ಜನರು ಸಕ್ಕರೆ ರಹಿತ, ಆರೋಗ್ಯಕರ ಆಹಾರವನ್ನು ಹೆಚ್ಚು ಮೆಚ್ಚುತ್ತಿದ್ದಾರೆ. ಈ ದೃಷ್ಟಿಯಿಂದಲೇ ನಂದಿನಿ ಶುಗರ್ ಫ್ರೀ ಸಿಹಿತಿಂಡಿಗಳನ್ನು ಬಿಡುಗಡೆ ಮಾಡಲಾಗಿದೆ. ಮಧುಮೇಹಿಗಳಿಗೆ ಪ್ರಯೋಜನಕರವಾಗುವಂತೆ ಹಾಗೂ ಎಲ್ಲರಿಗೂ ರುಚಿಕರವಾಗುವಂತೆ ಉತ್ಪನ್ನಗಳನ್ನು ತಯಾರಿಸಲಾಗಿದೆ,” ಏಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ತಿಳಿಸಿದ್ದಾರೆ
ಹಬ್ಬದ ಕೊಡುಗೆಯ ಭಾಗವಾಗಿ ಬಿಡುಗಡೆಯಾದ ಹೊಸ ಉತ್ಪನ್ನಗಳು:
ನಂದಿನಿ ಖೋವಾ ಗುಲಾಬ್ ಜಾಮೂನ್ (No added sugar)
500 ಗ್ರಾಂ ಪ್ಯಾಕ್ – ₹220/-
ನಂದಿನಿ ಹಾಲಿನ ಪೇಡಾ (No added sugar)
200 ಗ್ರಾಂ ಪ್ಯಾಕ್ – ₹170/-
ನಂದಿನಿ ಬೆಲ್ಲ ಓಟ್ಸ್ ಮತ್ತು ನಟ್ಸ್ ಬರ್ಫಿ
200 ಗ್ರಾಂ ಪ್ಯಾಕ್ – ₹170/-
ಈ ಎಲ್ಲಾ ಉತ್ಪನ್ನಗಳು ಈಗ ನಂದಿನಿ ಔಟ್‌ಲೆಟ್‌ಗಳು, ಸಹಕಾರಿಗಳ ಮಾರುಕಟ್ಟೆ ಕೇಂದ್ರಗಳು ಹಾಗೂ ಆಯ್ದ ರೀಟೇಲ್ ಮಳಿಗೆಗಳಲ್ಲಿ ಲಭ್ಯವಾಗಲಿವೆ. ಕೆಎಂಎಫ್ ಹೇಳುವಂತೆ, ಈ ಸಿಹಿತಿಂಡಿಗಳು ಸಂಪೂರ್ಣವಾಗಿ ಶುದ್ಧ ಹಾಲು ಮತ್ತು ನೈಸರ್ಗಿಕ ಪದಾರ್ಥಗಳಿಂದ ತಯಾರಿಸಲ್ಪಟ್ಟಿದೆ.
ಕೆಎಂಎಫ್‌ನ ಸಂದೇಶ: “ನಮ್ಮ ಉದ್ದೇಶ ಆರೋಗ್ಯ ಕಾಪಾಡುತ್ತಾ ಹಬ್ಬದ ಸಂಭ್ರಮವನ್ನು ಸಿಹಿಯಾಗಿ ಆಚರಿಸಲು ಸಹಾಯ ಮಾಡುವುದು. ನಂದಿನಿಯ ಹೊಸ ಉತ್ಪನ್ನಗಳು ಈ ದೀಪಾವಳಿಯಲ್ಲಿ ಆರೋಗ್ಯಕರ ಸಿಹಿಯ ಆಯ್ಕೆಯಾಗಲಿ ಎಂದು ಆಶಿಸುತ್ತೇವೆ.”
ನಂದಿನಿ ಬ್ರಾಂಡ್ ಈಗಾಗಲೇ ಹಾಲು, ಮೊಸರು, ತುಪ್ಪ, ಐಸ್‌ಕ್ರೀಮ್, ಚಾಕೋಲೇಟ್, ಮತ್ತು ಸಿಹಿತಿಂಡಿಗಳ ಕ್ಷೇತ್ರದಲ್ಲಿ ವಿಶ್ವಾಸಾರ್ಹ ಹೆಸರು ಗಳಿಸಿದ್ದು, ಇದೀಗ “No Added Sugar” ವರ್ಗದತ್ತ ಪಾದಾರ್ಪಣೆ ಮಾಡುವ ಮೂಲಕ ಆರೋಗ್ಯ ಕಾಳಜಿಯ ಗ್ರಾಹಕರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಿದೆ.