Home ಸುದ್ದಿ ರಾಜ್ಯ ಜಿಯೋಗೆ ಕರ್ನಾಟಕದಲ್ಲಿ 2.95 ಲಕ್ಷ ಹೊಸ ಚಂದಾದಾರ ಸೇರ್ಪಡೆ: ಟ್ರಾಯ್ ವರದಿ

ಜಿಯೋಗೆ ಕರ್ನಾಟಕದಲ್ಲಿ 2.95 ಲಕ್ಷ ಹೊಸ ಚಂದಾದಾರ ಸೇರ್ಪಡೆ: ಟ್ರಾಯ್ ವರದಿ

0

ಬೆಂಗಳೂರು: ಕರ್ನಾಟಕದ ದೂರಸಂಪರ್ಕ ವಲಯದಲ್ಲಿ ಜಿಯೋ ತನ್ನ ಪಾರಮ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಪ್ರಕಟಿಸಿರುವ ಇತ್ತೀಚಿನ ವರದಿಯ ಪ್ರಕಾರ, 2025ರ ಸೆಪ್ಟೆಂಬರ್ ತಿಂಗಳಲ್ಲಿ ಜಿಯೋ 2.95 ಲಕ್ಷ ಹೊಸ ಮೊಬೈಲ್ ಚಂದಾದಾರರನ್ನು ಸೇರ್ಪಡೆಗೊಳಿಸಿದೆ.

ಈ ಸೇರ್ಪಡೆಯೊಂದಿಗೆ ಕರ್ನಾಟಕದಲ್ಲಿ ಜಿಯೋದ ಒಟ್ಟು ಮೊಬೈಲ್ ಬಳಕೆದಾರರ ಸಂಖ್ಯೆ 2.56 ಕೋಟಿಗೆ ತಲುಪಿದೆ. ವೈರ್ ಲೆಸ್ ಸೇವೆಗಳ ಜೊತೆಗೆ ವೈರ್ ಲೈನ್ ವಲಯದಲ್ಲಿಯೂ ಜಿಯೋ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ.

ಸೆಪ್ಟೆಂಬರ್ ವೇಳೆಗೆ ಕರ್ನಾಟಕ ವೃತ್ತದಲ್ಲಿ ಜಿಯೋ ಏರ್‌ಫೈಬರ್ ಚಂದಾದಾರರ ಸಂಖ್ಯೆ 3,74,894ಕ್ಕೆ ಏರಿಕೆಯಾಗಿದೆ. ಆಗಸ್ಟ್‌ನಲ್ಲಿ ಈ ಸಂಖ್ಯೆ 3,63,327 ಆಗಿತ್ತು. ಸಮೀಪದ ಪ್ರತಿಸ್ಪರ್ಧಿಯಾಗಿರುವ ಭಾರ್ತಿ ಏರ್‌ಟೆಲ್ ಅದೇ ಅವಧಿಯಲ್ಲಿ ಕೇವಲ 2,04,945 ಹೊಸ ಚಂದಾದಾರರನ್ನು ದಾಖಲಿಸಿದೆ.

ಟ್ರಾಯ್ ವರದಿ ಪ್ರಕಾರ, ರಾಷ್ಟ್ರವ್ಯಾಪಿ ಮಟ್ಟದಲ್ಲಿ ಜಿಯೋ ಒಟ್ಟು 50.54 ಕೋಟಿ ಗ್ರಾಹಕರು ಮತ್ತು 50.77% ಮಾರುಕಟ್ಟೆ ಪಾಲು ಹೊಂದಿ ಮುಂಚೂಣಿಯಲ್ಲಿದೆ. ಭಾರ್ತಿ ಏರ್‌ಟೆಲ್ 30.14 ಕೋಟಿ ಗ್ರಾಹಕರು (31.18%), ವೊಡಾಫೋನ್-ಐಡಿಯಾ 12.78 ಕೋಟಿ (12.83%), ಮತ್ತು ಸರ್ಕಾರಿ ಬಿಎಸ್ಎನ್ಎಲ್ 3.49% ಮಾರುಕಟ್ಟೆ ಪಾಲು ಹೊಂದಿವೆ.

ಸ್ಥಿರ ಬ್ರಾಡ್‌ಬ್ಯಾಂಡ್ ಸೇವೆಗಳ ಕ್ಷೇತ್ರದಲ್ಲಿಯೂ ಜಿಯೋ ತನ್ನ ಅಗ್ರಸ್ಥಾನ ಕಾಯ್ದುಕೊಂಡಿದೆ. ಸೆಪ್ಟೆಂಬರ್ ತಿಂಗಳಲ್ಲಿ ಮಾತ್ರವೇ 3.22 ಲಕ್ಷ ಹೊಸ ಗ್ರಾಹಕರು ಜಿಯೋ ಸ್ಥಿರ ವೈರ್‌ಲೆಸ್ ಸಂಪರ್ಕ (FWA) ಪಡೆದುಕೊಂಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version