Home ಸುದ್ದಿ ವಿದೇಶ ಪಾಕ್‌ನಿಂದ ಕಾಲ್ಕಿತ್ತ ಮಲ್ಟಿನ್ಯಾಷನಲ್ ಬ್ರ್ಯಾಂಡ್‌ಗಳು: ಜನರಿಗೆ ಕಳಪೆ ಉತ್ಪನ್ನಗಳೇ ಗತಿ!

ಪಾಕ್‌ನಿಂದ ಕಾಲ್ಕಿತ್ತ ಮಲ್ಟಿನ್ಯಾಷನಲ್ ಬ್ರ್ಯಾಂಡ್‌ಗಳು: ಜನರಿಗೆ ಕಳಪೆ ಉತ್ಪನ್ನಗಳೇ ಗತಿ!

3

ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ತೀವ್ರ ಬಿಕ್ಕಟ್ಟಿಗೆ ಸಿಲುಕಿರುವ ಹಿನ್ನೆಲೆಯಲ್ಲಿ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಲವಾರು ಬಹುರಾಷ್ಟ್ರೀಯ ಕಂಪನಿಗಳು ತಮ್ಮ ವ್ಯವಹಾರವನ್ನು ಸ್ಥಗಿತಗೊಳಿಸಿವೆ.

ಇದೀಗ ಅಮೆರಿಕ ಮೂಲದ ಪ್ರಖ್ಯಾತ ಪ್ರಾಕ್ಟರ್ ಆ್ಯಂಡ್ ಗ್ಯಾಂಬಲ್  ಕಂಪನಿಯೂ ಪಾಕಿಸ್ತಾನಕ್ಕೆ ಗುಡ್ ಬೈ ಹೇಳಿದ್ದು, ಅಲ್ಲಿನ ಜನಪ್ರಿಯ ಉತ್ಪನ್ನಗಳಾದ ಜಿಲೆಟ್ ಶೇವಿಂಗ್ ಬ್ಲೇಡ್, ಹೆಡ್‌  ಹೆಡ್ ಆ್ಯಂಡ್ ಶೋಲ್ಡರ್ಸ್ ಶಾಂಪೂ, ಏರಿಯಲ್ ವಾಷಿಂಗ್ ಪೌಡರ್ ಇನ್ನು ಮುಂದೆ ಪಾಕಿಸ್ತಾನದ ಮಾರುಕಟ್ಟೆಯಲ್ಲಿ ಲಭ್ಯವಾಗುವುದಿಲ್ಲ. ಪಾಕಿಸ್ತಾನದ ಆರ್ಥಿಕ ದುಸ್ಥಿತಿಗೆ ಮತ್ತೊಂದು ಸ್ಪಷ್ಟ ನಿದರ್ಶನವಾಗಿದೆ

ಪಿ&ಜಿ ನಿರ್ಗಮನ: ತನ್ನ ಉತ್ಪಾದನಾ ಘಟಕಗಳನ್ನು ಮುಚ್ಚಿದ ನಂತರ, ಕಳೆದ ಒಂದು ವಾರದಿಂದ ಈ ಉತ್ಪನ್ನಗಳ ಪೂರೈಕೆ ಸಂಪೂರ್ಣವಾಗಿ ನಿಂತುಹೋಗಿದೆ. ಪಾಕಿಸ್ತಾನದ ಮನೆಮಾತಾಗಿದ್ದ ಈ ಬ್ರ್ಯಾಂಡ್‌ಗಳು ಲಭ್ಯವಿಲ್ಲದೆ ಅಲ್ಲಿನ ಗ್ರಾಹಕರು ತೀವ್ರ ನಿರಾಸೆಗೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ತಮ್ಮ ಅಚ್ಚುಮೆಚ್ಚಿನ ಉತ್ಪನ್ನಗಳು ಸಿಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಲಾಹೋರ್‌ನ ನದೀಮ್ ಖಾನ್ ಎಂಬುವರು ಟ್ವೀಟ್ ಮಾಡಿ, “ಪಿ&ಜಿ ಕಂಪನಿ ಪಾಕಿಸ್ತಾನದಲ್ಲಿ 2.4 ಕೋಟಿ ಗ್ರಾಹಕರನ್ನು ಹೊಂದಿದ್ದರೂ, ಏಕೆ ನಿರ್ಗಮಿಸುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ” ಎಂದು ಪ್ರಶ್ನಿಸಿದ್ದಾರೆ. ಆದರೆ, ಕಂಪನಿಗಳು ಈ ನಿರ್ಧಾರ ಕೈಗೊಳ್ಳಲು ಬಲವಾದ ಕಾರಣಗಳಿವೆ.

ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು ಮತ್ತು ಕಂಪನಿಗಳ ವಲಸೆ: ವಾಸ್ತವವಾಗಿ, ಪಾಕಿಸ್ತಾನದ ಅಸ್ಥಿರ ಆರ್ಥಿಕತೆ, ಹಣದುಬ್ಬರ, ವ್ಯಾಪಾರಕ್ಕೆ ಪ್ರತಿಕೂಲವಾದ ನೀತಿಗಳು ಮತ್ತು ಕಾನೂನು ಸುವ್ಯವಸ್ಥೆಗಳ ಕೊರತೆ ಬಹುರಾಷ್ಟ್ರೀಯ ಕಂಪನಿಗಳ ನಿರ್ಗಮನಕ್ಕೆ ಪ್ರಮುಖ ಕಾರಣಗಳಾಗಿವೆ.

ಪಿ&ಜಿ ಮಾತ್ರವಲ್ಲದೆ, ಈಗಾಗಲೇ ಮೈಕ್ರೋಸಾಫ್ಟ್, ಶೆಲ್ (ಇಂಧನ ಸಂಸ್ಥೆ), ಊಬರ್, ಫೈಜರ್ (ಔಷಧ ಕಂಪನಿ) ಸೇರಿದಂತೆ ಅನೇಕ ದೊಡ್ಡ ಕಂಪನಿಗಳು ಪಾಕಿಸ್ತಾನವನ್ನು ತೊರೆದಿವೆ. ಬ್ರ್ಯಾಂಡ್‌ಗಳು ಮತ್ತು ಗುಣಮಟ್ಟದ ಉತ್ಪನ್ನಗಳ ಕೊರತೆಯಿಂದಾಗಿ ಪಾಕಿಸ್ತಾನದ ಗ್ರಾಹಕರು ಕಳಪೆ ಗುಣಮಟ್ಟದ ಸ್ಥಳೀಯ ಉತ್ಪನ್ನಗಳನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು ಮುಂದುವರಿದಂತೆ, ಇಂತಹ ಇನ್ನೂ ಹಲವು ಬಹುರಾಷ್ಟ್ರೀಯ ಕಂಪನಿಗಳು ಅಲ್ಲಿಂದ ನಿರ್ಗಮಿಸುವ ಸಾಧ್ಯತೆ ಇದೆ. ಇದು ಪಾಕಿಸ್ತಾನದ ಆರ್ಥಿಕತೆಗೆ ಮತ್ತಷ್ಟು ಹೊಡೆತ ನೀಡಲಿದೆ ಎಂಬುದರಲ್ಲಿ ಸಂಶಯವಿಲ್ಲ.

3 COMMENTS

LEAVE A REPLY

Please enter your comment!
Please enter your name here

Exit mobile version