ಕೋಚಿಂಗ್‌ಗೆ ಹೋದರೆ ಪರೀಕ್ಷೆಗೆ ಬರಲೇಬೇಡಿ: ಹೈಕೋರ್ಟ್ ನಿರ್ದೇಶನ

0
42

ಜೈಪುರ: 9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳು ಶಾಲಾ ಸಮಯದಲ್ಲಿ ಕೋಚಿಂಗ್ ಕ್ಲಾಸ್‌ಗಳಿಗೆ ತೆರಳಿದರೆ ಪರೀಕ್ಷೆಗೆ ಹಾಜರಾಗಲು ಬಿಡಬಾರದು ಎಂದು ರಾಜಸ್ಥಾನ ಹೈಕೋರ್ಟ್ ನಿರ್ದೇಶನ ನೀಡಿದೆ.

ವಿದ್ಯಾರ್ಥಿಗಳಿಗೆ ಶೇ. 75 ಹಾಜರಾತಿ ಕಡ್ಡಾಯವಾಗಿದೆ. ಆದ್ದರಿಂದ ಶಾಲಾ ಸಮಯದಲ್ಲಿ ವಿದ್ಯಾರ್ಥಿಗಳು ಯಾವುದಾದರೂ ಕೋಚಿಂಗ್ ಕ್ಲಾಸ್‌ಗಳಿಗೆ ಹೋಗುತ್ತಿದ್ದಾರೆಯೇ ಎಂಬುದನ್ನು ವಿಶೇಷವಾಗಿ ಪರಿಶೀಲನೆ ನಡೆಸಬೇಕು. ಸೂಕ್ತ ಕಾರಣವಿಲ್ಲದೆ ಗೈರು ಹಾಜರಾಗುವ ವಿದ್ಯಾರ್ಥಿಗಳು ಮಾತ್ರವಲ್ಲದೆ, ಅಂತಹ ನಡವಳಿಕೆಯನ್ನು ಕ್ರಮಬದ್ಧಗೊಳಿಸುವ ಶಾಲೆಗಳು ಹಾಗೂ ಕೋಚಿಂಗ್ ಕ್ಲಾಸ್‌ಗಳನ್ನು ನಡೆಸುವ ಸಂಸ್ಥೆಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಕೇಂದ್ರಿಯ ಮಾಧ್ಯಮಿಕ ಶಿಕ್ಷಣ ಮಂಡಳಿ ಹಾಗೂ ರಾಜಸ್ತಾನ ಪ್ರೌಢ ಶಿಕ್ಷಣ ಮಂಡಳಿಗೆ ನ್ಯಾಯಮೂರ್ತಿಗಳಾದ ದಿನೇಶ್ ಮೆಹ್ತಾ ಹಾಗೂ ಅನೂಪ್ ಕುಮಾರ್ ಅವರ ವಿಭಾಗೀಯ ಪೀಠ ಸೂಚಿಸಿದೆ.

ಶಾಲಾ ಅವಧಿಯಲ್ಲಿ ವಿದ್ಯಾರ್ಥಿಗಳ ಗೈರುಹಾಜರಾತಿ ಹಾಗೂ ಕೋಚಿಂಗ್ ಕ್ಲಾಸ್‌ಗಳ ತಪಾಸಣೆ ನಡೆಸಲು ವಿಶೇಷ ತನಿಖಾ ತಂಡಗಳನ್ನ ರಚಿಸಬೇಕು ಎಂದು ಈ ಎರಡೂ ಶಿಕ್ಷಣ ಮಂಡಳಿಗಳಿಗೆ ಸೂಚಿಸಿದೆ. ಶಾಲಾ ಬಿಟ್ಟು ಕೋಚಿಂಗ್ ಕ್ಲಾಸ್‌ಗಳಿಗೆ ತೆರಳಿದರೂ ಅಂತಹ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಹಾಜರಾತಿ ನೀಡುವ ಪರಿಪಾಠವೂ ಇದೆ ಎಂದು ನ್ಯಾಯಪೀಠ ಉಲ್ಲೇಖಿಸಿದೆ.

ಶೈಕ್ಷಣಿಕ ಅವಧಿಯ ನಡುವೆಯೇ ಶಾಲೆ ಬಿಡುವ ವಿದ್ಯಾರ್ಥಿಗಳಿಗೆ ಮಂಡಳಿಗಳ ಪರೀಕ್ಷೆಗೆ ಹಾಜರಾಗುವುದನ್ನು ತಡೆಯಬಹುದೆಂದು ಹೇಳಿರುವ ನ್ಯಾಯಪೀಠ, ಶಾಲಾ ತರಗತಿಯ ಅವಧಿಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಹಾಜರಾತಿಯೂ ಕಡ್ಡಾಯವಾಗಿದೆ. ಹೀಗಾಗಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಹಾಜರಾತಿಯನ್ನು ಖಾತ್ರಿ ಮಾಡಬೇಕೆಂದು ಕಟ್ಟಪ್ಪಣೆ ಮಾಡಿದೆ.

Previous articleಟ್ರಂಪ್ ಆಡಳಿತ ಬಗ್ಗೆ ಅಮೆರಿಕನ್ನರಲ್ಲೇ ಅತೃಪ್ತಿ
Next articleಬೆಳಗಾವಿಯಲ್ಲಿ ನಿರ್ಮಾಣವಾಗಲಿದೆ ತಿರುಪತಿ ತಿರುಮಲ ದೇವಸ್ಥಾನ

LEAVE A REPLY

Please enter your comment!
Please enter your name here