ನವರಾತ್ರಿಯ ಮೊದಲ ದಿನದಿಂದ ಜಿಎಸ್‌ಟಿ ಉಳಿಕೆ ಉತ್ಸವ ಆರಂಭ

0
49

ನವದೆಹಲಿ: ನಾಳೆಯಿಂದ ಜಿಎಸ್​ಟಿ ಪರಿಷ್ಕೃತ ದರ ಜಾರಿಗೆ ಬರಲಿದ್ದು, ನವರಾತ್ರಿಯ ಮೊದಲ ದಿನದಿಂದ ಜಿಎಸ್‌ಟಿ ಉಳಿಕೆ ಉತ್ಸವ ಆರಂಭವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಜನರಿಗೆ ನವರಾತ್ರಿಯ ಶುಭಾಶಯಗಳನ್ನು ತಿಳಿಸಿದರು. ನಾಳೆಯಿಂದ ನವರಾತ್ರಿ ಹಬ್ಬ ಆರಂಭ ಇದರೊಂದಿಗೆ ಜಿಎಸ್‌ಟಿ ಬಚತ್ (ಉಳಿಕೆ) ಉತ್ಸವ ಕೂಡ ಪ್ರಾರಂಭವಾಗಲಿದೆ ಎಂದರು.

ಸೆಪ್ಟೆಂಬರ್​ 22 ರಿಂದ ಜಿಎಸ್​ಟಿ ಪರಿಷ್ಕೃತ ದರ 2.0 ಜಾರಿಗೆ ಬರಲಿದೆ. ಇದರಿಂದಾಗಿ ಮಧ್ಯಮ ವರ್ಗದ ಜನರಿಗೆ ಹೊಸ ಜಿಎಸ್​ಟಿ ಉಪಯೋಗ ಆಗಲಿದೆ. ಜನರು ತಮ್ಮ ಇಷ್ಟದ ವಸ್ತುಗಳನ್ನು ಖರೀದಿ ಮಾಡಬಹುದು.

ಆತ್ಮನಿರ್ಭರ ಭಾರತದತ್ತ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ. ದೇಶವನ್ನು ಈ ಪರಿಸ್ಥಿತಿಯಿಂದ ಹೊರ ತರುವುದು ಮುಖ್ಯವಾಗಿದ್ದು, ಈಗ ಒಂದು ದೇಶ, ಒಂದು ತೆರಿಗೆ ಸಹಕಾರವಾಗಿದೆ ಎಂದರು.

ಜಿಎಸ್‌ಟಿ ಸುಧಾರಣೆಗಳು ದೇಶದ ಬೆಳವಣಿಗೆಗೆ ವೇಗ ನೀಡುತ್ತವೆ ಮತ್ತು ವ್ಯವಹಾರವನ್ನು ಸರಳಗೊಳಿಸುತ್ತವೆ. ಅಷ್ಟೇ ಅಲ್ಲದೇ ಹೂಡಿಕೆಯತ್ತ ಹೆಚ್ಚು ಆಕರ್ಷಕವಾಗಿಸುತ್ತವೆ ಮತ್ತು ಅಭಿವೃದ್ಧಿಯಲ್ಲಿ ಪ್ರತಿ ರಾಜ್ಯವನ್ನು ಸಮಾನ ಪಾಲುದಾರರನ್ನಾಗಿ ಮಾಡುತ್ತವೆ ಎಂದು ಮೋದಿ ತಿಳಿಸಿದರು.

Previous articleಮೈಸೂರು ರತ್ನಸಿಂಹಾಸನದ ರೋಚಕ ಕಥನ
Next articleಕೂಡಲಸಂಗಮ ಪೀಠದಿಂದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ

LEAVE A REPLY

Please enter your comment!
Please enter your name here