ಬೆಂಗಳೂರು: ಕರ್ನಾಟಕದ ಸಣ್ಣ ವ್ಯಾಪಾರಿಗಳ ಸಂಘಟನೆಗಳ ಕರೆ ಮೇರೆಗೆ ಇಂದಿನಿಂದ ಮೂರು ದಿನಗಳವರೆಗೆ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ. ಜುಲೈ 23ರಿಂದ 25ರವರೆಗೆ ಈ ಬಂದ್ ಜಾರಿಗೆ ಬರಲಿದ್ದು, ಗ್ರಾಹಕರು ಹಾಲು, ಮೊಸರು, ತುಪ್ಪ ಸೇರಿದಂತೆ ಹಾಲಿನ ಉತ್ಪನ್ನಗಳನ್ನು ಖರೀದಿಸಲು ತೊಂದರೆಯನ್ನು ಅನುಭವಿಸಬಹುದಾಗಿದೆ.
ಯುಪಿಐ ಪಾವತಿ ಆಧಾರದ ಮೇಲೆ ಜಿಎಸ್‌ಟಿ ನೋಟಿಸ್‌ಗಳು ಸಣ್ಣ ವ್ಯಾಪಾರಿಗಳಿಗೆ ಬರುವ ಹಿನ್ನಲೆಯಲ್ಲಿ, ರಾಜ್ಯಾದ್ಯಂತ ಸಣ್ಣ ವ್ಯಾಪಾರಿಗಳ ಒಕ್ಕೂಟಗಳು ಮೂರು ದಿನಗಳ ಬಂದ್‌ಗೆ ಕರೆ ನೀಡಿವೆ. ಇದರಿಂದಾಗಿ ಜುಲೈ 23ರಿಂದ 25ರವರೆಗೆ ಬೆಂಗಳೂರಿನಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳ ಮಾರಾಟ ಸ್ಥಗಿತವಾಗಲಿದೆ.
ಬಂದ್ ಹಂತಗಳು
- ಜುಲೈ 23 – ಹಾಲು, ಮೊಸರು, ತುಪ್ಪ ಮಾರಾಟ ಸ್ಥಗಿತ
- * ಜುಲೈ 24 – ಸಿಗರೇಟು, ಗುಟ್ಕಾ ಮಾರಾಟ ಬಂದ್
- * ಜುಲೈ 25 – ಬೇಕರಿ, ಕಾಂಡಿಮೆಂಟ್ಸ್ ಮತ್ತು ಚಹಾ ಅಂಗಡಿ ತಾತ್ಕಾಲಿಕ ಬಂದ್
- * ಜುಲೈ 25ರಂದು ಕರ್ನಾಟಕ ಕಾರ್ಮಿಕ ಪರಿಷತ್ ಬಂದ್‌ಗೆ ಕರೆ
- ಜುಲೈ 25ರ ಬಂದ್ ಕರೆ ದಿನ ಬೆಂಗಳೂರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಯಲಿದ್ದು, ಸುಮಾರು 10 ಸಾವಿರ ಅಂಗಡಿಗಳ ಮಾಲೀಕರು ಭಾಗಿಯಾಗುವ ನಿರೀಕ್ಷೆ ಇದೆ. ಜಿಎಸ್‌ಟಿ ನೋಟಿಸ್ ವಿಚಾರದಲ್ಲಿ ರಾಜ್ಯದ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ.
ಯುಪಿಐ ಪಾವತಿಗಳ ಆಧಾರದ ಮೇಲೆ ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್‌ಗಳು ಬಂದಿರುವುದು. ಈ ವಿಚಾರವಾಗಿ ವ್ಯಾಪಾರಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಸಣ್ಣ ವ್ಯಾಪಾರಿಗಳ ಅಸಮಾಧಾನಕ್ಕೆ ಕಾರಣವಾದದ್ದು, ₹40 ಲಕ್ಷಕ್ಕಿಂತ ಹೆಚ್ಚು ಪಾವತಿಯಾದ UPI ವ್ಯವಹಾರಗಳ ಆಧಾರದ ಮೇಲೆ ತೆರಿಗೆ ನೋಟಿಸ್ ನೀಡಿರುವ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಕ್ರಮವಾಗಿದೆ.
ಈ ನೋಟಿಸ್‌ಗಳಿಂದ ಸಂಕಷ್ಟಕ್ಕೊಳಗಾದ ವ್ಯಾಪಾರಿಗಳು, ಸರಳ ಪಾವತಿ ಪದ್ದತಿಯ ಮೇಲೆ ಹೊಸ ತೆರಿಗೆ ಹೊರಿಸಲು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಾಲು ಬಳಸದೆ ಟೀ, ಕಾಫಿ, ಲೈಮ್ ಟೀಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದಾರೆ.
ಪ್ರತಿಭಟನಾರ್ಥವಾಗಿ ಕಪ್ಪು ಪಟ್ಟಿ ಧರಿಸಿ ಇತರೆ ವಸ್ತುಗಳ ಮಾರಾಟ ಮಾಡಲಾಗುತ್ತದೆ. ಜುಲೈ 25ರಂದು ಅಂಗಡಿ ಬಂದ್ ಮಾಡಿ, ಕುಟುಂಬ ಸಮೇತರಾಗಿ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಹೋರಾಟ ನಡೆಸಲಿದ್ದಾರೆ. ಇದರಿಂದಾಗಿ ಇಂದಿನಿಂದ ಮೂರು ದಿನ ಹಾಲು, ಹಾಲಿನ ಉತ್ಪನ್ನ ಮಾರಾಟ ಭಾಗಶಃ ಬಂದ್ ಆಗಲಿದೆ.
ಬಿಜೆಪಿ ಸಹಾಯವಾಣಿ: ಇದೀಗ ಈ ವಿಚಾರ ರಾಜಕೀಯಗೊಂಡಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಆರೋಪ-ಪ್ರತ್ಯಾರೋಪ ನಡೆದಿವೆ. ಈ ನಡುವೆ, ವ್ಯಾಪಾರಿಗಳಿಗೆ ಬೆಂಬಲದ ಭಾಗವಾಗಿ ಕರ್ನಾಟಕ ಬಿಜೆಪಿ ಘಟಕ ಸಹಾಯವಾಣಿಯನ್ನು ಆರಂಭಿಸಿದೆ.
ವಾಣಿಜ್ಯ ತೆರಿಗೆ ಇಲಾಖೆ ಹೇಳಿಕೆಯ ಪ್ರಕಾರ, ನೋಟಿಸ್ ಬಂದಿದ್ದರೂ ಅದನ್ನು ಆಧಾರವಾಗಿ ತೆರಿಗೆ ವಿಧಿಸುವುದು ತಕ್ಷಣ ಆಗುವುದಿಲ್ಲ. ವ್ಯಾಪಾರಿಗಳು ಉತ್ತರದ ಮೇಲೆ ಮಾತ್ರ ಮೌಲ್ಯ ನಿರ್ಧಾರವಾಗುತ್ತದೆ, ದಾಖಲೆ ಸಮೇತ ಸ್ಪಷ್ಟನೆ ನೀಡಿದರೆ ಟ್ಯಾಕ್ಸ್ ಕಟ್ಟುವ ಪ್ರಮಯೇ ಬರಲ್ಲ ಎಂದು ಹೇಳಿದೆ.