Home ತಾಜಾ ಸುದ್ದಿ 4 ವರ್ಷದಲ್ಲಿ 6ನೇ ಬಾರಿ ಅಧ್ಯಕ್ಷರ ಬದಲಾವಣೆ ದಾಖಲೆ

4 ವರ್ಷದಲ್ಲಿ 6ನೇ ಬಾರಿ ಅಧ್ಯಕ್ಷರ ಬದಲಾವಣೆ ದಾಖಲೆ

0

ನಾವಲಗಿ ಗ್ರಾಪಂ ಅಧ್ಯಕ್ಷರಾಗಿ ರೇಖಾ ಕಾಂತಿ ಅವಿರೋಧ ಆಯ್ಕೆ

ಗ್ರಾಮೀಣ ಪ್ರದೇಶದ ಜನತೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಯ 4 ವರ್ಷದ ಅವಧಿಯಲ್ಲಿ 6 ಜನ ಸದಸ್ಯರು ಅಧ್ಯಕ್ಷರಾಗಿ ಬದಲಾವಣೆಯಾಗುತ್ತಿರುವದು ದಾಖಲೆಯಾಗಿದೆ.

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮ ಪಂಚಾಯಿತಿಯು ಇಂತಹ ವಿಶೇಷತೆಯನ್ನು ಕಾಣುವಲ್ಲಿ ಕಾರಣವಾಗಿದೆ. ಸೋಮವಾರ ನಡೆದ ಮತ್ತೇ ಅಧ್ಯಕ್ಷ ಸ್ಥಾನದ ಚುನಾವಣೆಯು ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಕಾರಣ ರೇಖಾ ಕಾಂತಿಯವರನ್ನು ಅವಿರೋಧವಾಗಿ ಆಯ್ಕೆ ಮಾಡುವಲ್ಲಿ ಸದಸ್ಯರು ಕಾರಣರಾದರು.

20 ಸದಸ್ಯರನ್ನೊಳಗೊಂಡ ಗ್ರಾಮ ಪಂಚಾಯಿತಿಯಲ್ಲಿ 16 ಜನ ಬಿಜೆಪಿ ಬೆಂಬಲಿತ ಹಾಗು 4 ಸದಸ್ಯರು ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ.

ಸದಾಶಿವ ಲೆಂಡಿ ನಾಮಪತ್ರ ಸಲ್ಲಿಸಿ ವಾಪಸ್ ಪಡೆದ ಕಾರಣ ಕಾಂತಿ ಅವಿರೋಧ ಆಯ್ಕೆಗೆ ಕಾರಣವಾಯಿತು.

ಬರುವ ಡಿಸೆಂಬರ್ ತಿಂಗಳವರೆಗೆ ಅವಧಿಗೆ 6 ನೇ ಬಾರಿ ಅಧ್ಯಕ್ಷರ ಬದಲಾವಣೆ ಮೂಲಕ ಆಡಳಿತದ ಚುಕ್ಕಾಣಿ ರೇಖಾ ಕಾಂತಿಯವರಿಗೆ ನೀಡಲಾಯಿತೆಂದು ಬಿಜೆಪಿ ವರಿಷ್ಠರು ತಿಳಿಸಿದರು.

ಕಳೆದ 4 ವರ್ಷಗಳಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಗ್ರಾಮ ಪಂಚಾಯಿತಿಗೆ ಐವರು ಅಧ್ಯಕ್ಷರುಗಳಾಗಿ ಮುತ್ತಪ್ಪ ಅಂಗಡಿ, ಬಸಪ್ಪ ಬಳವಾಡ, ಸುಭಾಸ ಕಾಂತಿ, ಯಮನವ್ವ ಕಂಚು, ಸದಾಶಿವ ಸವದಿ ತಲಾ 10 ತಿಂಗಳು ಆಡಳಿತ ನಡೆಸಿದ್ದರು.

ಈ ಸಂದರ್ಭದಲ್ಲಿ ಆನಂದ ಕಂಪು, ಗುರು ಮರಡಿಮಠ, ಗೋವಿಂದ ಕಂಚು, ಲಕ್ಷö್ಮಣ ಸವದಿ, ಅಲ್ಲಪ್ಪ ಮುಗಳಖೋಡ, ಈರಪ್ಪ ವಾಲಿ, ಬಸಪ್ಪ ಗಣಿ, ಬಸು ಮೆಟಗುಡ್ಡ, ಬಸಪ್ಪ ಶೇಗುಣಸಿ, ದಾನಪ್ಪ ಆಸಂಗಿ ಸೇರಿದಂತೆ ಅನೇಕರಿದ್ದರು.

`5 ವರ್ಷದಲ್ಲಿ ಇಬ್ಬರು ಅಧ್ಯಕ್ಷರಾಗುವದು ಆಡಳಿತಾತ್ಮಕ ಹಿತದೃಷ್ಟಿಯಿಂದ ಒಳಿತು. ಒಡಂಬಡಿಕೆ ಹಾಗು ಸಹಕಾರದಿಂದ ಹೀಗೆ ನಡೆಯುತ್ತಿವೆ. ಗ್ರಾಮ ಅಭಿವೃದ್ಧಿಗೆ ಹಿನ್ನಡೆಯಾಗಬಾರದು.’—– ಸಿದ್ದು ಸವದಿ, ಶಾಸಕರು, ತೇರದಾಳ.

Exit mobile version