Home ಅಪರಾಧ ನವಜಾತ ಶಿಶು ತಿಪ್ಪೆಗೆ ಎಸೆದ ಇಬ್ಬರ ಬಂಧನ

ನವಜಾತ ಶಿಶು ತಿಪ್ಪೆಗೆ ಎಸೆದ ಇಬ್ಬರ ಬಂಧನ

0

ಬೆಳಗಾವಿ: ಅಕ್ರಮ ಸಂಬಂಧದಲ್ಲಿ ಹುಟ್ಟಿದ ನವಜಾತ ಶಿಶುವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ತಿಪ್ಪೆಗೆ ಎಸೆದಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕಿತ್ತೂರು ತಾಲ್ಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಹಾಬಳೇಶ್ವರ ಕಾಳೋಜಿ ಮತ್ತು ಸಿಮ್ರಾನ ಮೌಲಾಸಾಬ್ ಮಾಣಿಕಭಾಯಿ ಎಂಬುವರೇ ಬಂಧಿತರು.
ಇವರಿಬ್ಬರೂ ಅಕ್ರಮ ಸಂಬಂಧದಲ್ಲಿದ್ದರು. ಇವರಿಗೆ ಅವಧಿಪೂರ್ವದಲ್ಲಿ ಹುಟ್ಟಿದ ಮಗುವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ತಿಪ್ಪೆಗೆ ಎಸೆಯುವುದಕ್ಕೆ ಬಂದಿದ್ದಾಗ ಪೊಲೀಸರಿಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದಾರೆ.
ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಮ್ರಾನ್‌ಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವಧಿಪೂರ್ವ ಮಗು ಸಾವನ್ನಪ್ಪಿದ ಕಾರಣಕ್ಕೆ ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ತಿಪ್ಪೆಗೆ ಎಸೆದಿದ್ದಾಗಿ ಒಪ್ಪಿಕೊಂಡಿದ್ದಾರೆ. ಕಿತ್ತೂರು ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Exit mobile version