Home News 24,680 ಗ್ರಾಮಗಳಿಗೆ 4ಜಿ ಸೌಲಭ್ಯ

24,680 ಗ್ರಾಮಗಳಿಗೆ 4ಜಿ ಸೌಲಭ್ಯ

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರ ಅಂತ್ಯೋದಯ ಕಲ್ಪನೆಯ ಅರ್ಥಪೂರ್ಣ ಸಾಕಾರಗೊಳಿಸುವ ನಿಟ್ಟಿನಲ್ಲಿ ದೇಶಾದ್ಯಂತ 4ಜಿ ತರಂಗಾಂತರ ಮೊಬೈಲ್ ಜೋಡಣೆಯ ಭಾಗವಾಗಿ ಕರ್ನಾಟಕ ರಾಜ್ಯದ ಒಟ್ಟು 1048 ಗ್ರಾಮಗಳಿಗೆ 4ಜಿ ಸೌಲಭ್ಯ ದೊರೆಯಲಿದ್ದು, ಧಾರವಾಡ ಲೋಕಸಭಾ ವ್ಯಾಪ್ತಿಯ ಒಟ್ಟು 11 ಗ್ರಾಮಗಳು ಸೇರಿವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಸೌಲಭ್ಯದಿಂದ ಬಿಟ್ಟುಹೋದ ಸುಮಾರು 24,680 ಗ್ರಾಮಗಳಿಗೆ ಒಟ್ಟು 26,316 ಕೋಟಿ ರೂ.ಗಳ ವೆಚ್ಚದಲ್ಲಿ ಈ ಮೂಲಭೂತ ಸೌಲಭ್ಯ ಕಲ್ಪಿಸುವ ಯೋಜನೆಗೆ ಕೇಂದ್ರ ಸರಕಾರ ಕಳೆದ ತಿಂಗಳು ಅನುಮತಿ ನೀಡಿದೆ ಎಂದು ತಿಳಿಸಿದ್ದಾರೆ.
ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಅಳ್ನಾವರ ತಾಲೂಕಿನ ಕಿವಡೆಬೈಲು, ಕಲಘಟಗಿ ತಾಲೂಕಿನ ಜಯನಗರ, ಬಿದರಗಡ್ಡಿ, ಸುತಗಟ್ಟಿ, ಕಳಸನಕೊಪ್ಪ, ದೊಂಬ್ರಿಕೊಪ್ಪ, ಹುಬ್ಬಳ್ಳಿ ತಾಲೂಕಿನ ಶಾಂತಿನಗರ, ಧಾರವಾಡ ತಾಲೂಕಿನ ಬೆಳ್ಳಗಟ್ಟಿ, ಹುಣಸಿಕಮರಿ, ಶಿಗ್ಗಾವಿ ತಾಲೂಕಿನ ಬಸವನಕೊಪ್ಪ ಗ್ರಾಮಗಳು ಸೇರಿವೆ ಎಂದು ಸಚಿವ ಜೋಶಿ ಅವರು ವಿವರ ನೀಡಿದ್ದಾರೆ.

Exit mobile version