24 ವಿಮಾನ ನಿಲ್ದಾಣಗಳಲ್ಲಿ ಮೇ 15ರವರೆಗೆ ನಾಗರಿಕ ವಿಮಾನ ಹಾರಾಟ ಬಂದ್

0
16

ನವದೆಹಲಿ: ಭಾರತ-ಪಾಕಿಸ್ಥಾನ ನಡುವಿನ ಯುದ್ಧಭೀತಿಯ ಮುನ್ನೆಚ್ಚರಿಕೆಯ ಕಾರ್ಯಾಚರಣೆ ಕಾರಣಗಳಿಂದಾಗಿ ಉತ್ತರ ಮತ್ತು ಪಶ್ಚಿಮ ಭಾರತದ 32 ವಿಮಾನ ನಿಲ್ದಾಣಗಳಲ್ಲಿ 2025ರ ಮೇ 9 ರಿಂದ ಮೇ 14 ರವರೆಗೆ ನಾಗರಿಕ ವಿಮಾನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ನಾಗರಿಕ ವಿಮಾನಯಾನ ಪ್ರಾಧಿಕಾರದ ಸೂಚನೆಯಂತೆ ಚಂಡೀಗಢ, ಶ್ರೀನಗರ, ಅಮೃತಸರ, ಲೂಧಿಯಾನ, ಭುಂತರ್, ಕಿಶನ್‌ಗಢ್, ಪಟಿಯಾಲ, ಶಿಮ್ಲಾ, ಧರ್ಮಶಾಲಾ, ಮತ್ತು ಬಟಿಂಡಾ, ಜೈಸಲ್ಮೇರ್, ಜೋಧ್‌ಪುರ, ಲೇಹ್, ಬಿಕಾನೇರ್, ಪಠಾಣ್‌ಕೋಟ್, ಜಮ್ಮು, ಜಾಮ್‌ನಗರ್ ಮತ್ತು ಭುಜ್ ಚಂಡೀಗಢ, ಭುಜ್, ಜಾಮ್‌ನಗರ್ ಮತ್ತು ರಾಜ್‌ಕೋಟ್‌ಗೆ ಮೇ 15 ರವರೆಗೆ ವಿಮಾನಗಳ ಸೇವೆಯನ್ನು ರದ್ದುಗೊಳಿಸಲಾಗಿದೆ ಎಂದು ಏರ್ ಇಂಡಿಯಾ ಪೋಸ್ಟ್‌ನಲ್ಲಿ ತಿಳಿಸಿದೆ.

Previous articleರಾಜ್ಯದಲ್ಲಿ ಹೆಚ್ಚಿನ ಭದ್ರತೆ: ಪೊಲೀಸರ ಹೆಚ್ಚುವರಿ ರಜೆ ರದ್ದು
Next articleಪಾಕ್ ದಾಳಿಗೆ ಬಲಿಯಾದವರ ಕುಟುಂಬಕ್ಕೆ ಪರಿಹಾರ ಘೋಷಣೆ