24ಗ್ರಾಂ ಪೆನ್ನಿ ಸಮೇತ ಓರ್ವ ಬಂಧನ

0
13
ಬಂಧನ

ಬೆಳಗಾವಿ: ಮಾದಕ ದ್ರವ್ಯ ಪೆನ್ನಿಯನ್ನು ಮಾರಾಟ ಮಾಡುತ್ತಿದ್ದ ಯುವಕನನ್ನು ಮಾಲು ಸಹಿತ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಸಮರ್ಥ ನಗರದಲ್ಲಿ ಸಿಸಿಬಿ ಪೊಲೀಸ್ ಕಾರ್ಯಾಚರಣೆ ವೇಳೆ ಸಂಜಯ ಪರಶುರಾಮ ಪಾಟೀಲ(32) ಎಂಬುವನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಆತನಿಂದ ಚೀಟಿಯಲ್ಲಿದ್ದ ಸುಮಾರು 24 ಗ್ರಾಂ. ಪೆನ್ನಿಯನ್ನು ವಶಪಡಿಸಿಕೊಳ್ಳಲಾಗಿದೆ. ವಿವಿಧ ಚಿಕ್ಕ ಚಿಕ್ಕ ಪೊಟ್ಟಣಗಳಲ್ಲಿ ಕಟ್ಟಿಟ್ಟುಕೊಳ್ಳಲಾಗಿದ್ದ ಈ ಮಾದಕ ದ್ರವ್ಯಗಳನ್ನು ಗಿರಾಕಿಗಳಿಗೆ ತಲುಪಿಸಲು ಸಾಗಿಸಲಾಗುತ್ತಿತ್ತು ಎಂದು ತನಿಖೆಯ ವೇಳೆ ಗೊತ್ತಾಗಿದೆ. ಈ ಪೆನ್ನಿಯ ಬೆಲೆ 1,20,000 ಎಂದು ಅಂದಾಜಿಸಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Previous article100ಕ್ಕೂ ಅಧಿಕ ಸೈನಿಕ, ಪೊಲೀಸರಿಂದ ಪರೇಡ್
Next articleಆಲಿಕಲ್ಲು ಮಳೆಗೆ ಹಿಮಪಾತದಂತಾದ ಗ್ರಾಮ