20.92 ಕೋಟಿ ರೂ. ಉಳಿತಾಯದ ಬಜೆಟ್

ಹುಬ್ಬಳ್ಳಿ: ಮಹಾನಗರ ಪಾಲಿಕೆಯಲ್ಲಿ ಉಳಿತಾಯದ ಬಜೆಟ್‌ನ್ನು ಚಂದ್ರಶೇಖರ ಮನಗುಂಡಿ ಮಂಡಿಸಿದ್ದಾರೆ.
ಇಂದು ನಡೆದ ಪಾಲಿಕೆ ಬಜೆಟ್‌ ಮಂಡನೆ ವೇಳೆ. ಕೋರಂ ಇಲ್ಲದ್ದರಿಂದ ಆಯವ್ಯಯ ಮಂಡನಾ ಪ್ರಕ್ರಿಯೆ 1 ಗಂಟೆ ಸಭೆ ಮುಂದೂಡಲಾಗಿತ್ತು, ವಿರೋಧ ಪಕ್ಷದ ಸದಸ್ಯರ ತೀವ್ರ ವಿರೋಧದ ನಡುವೆಯೂ ತೆರಿಗೆ ನಿರ್ವಹಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಮನಗುಂಡಿ ಅವರು ಗುರುವಾರ 20.92 ಕೋಟಿ ರೂ. ಉಳಿತಾಯ ಬಜೆಟ್ ಮಂಡಿಸಿದರು. 2025-26ನೇ ಸಾಲಿನ ಒಟ್ಟು ಬಜೆಟ್ ಗಾತ್ರ 1512.67 ಕೋಟಿ ರೂ. ಆಗಿದ್ದು, ಕಳೆದ ಸಾಲಿಗೆ 1491.75 ಕೋಟಿ ರೂ. ಆಯವ್ಯಯ ಮಂಡಿಸಲಾಗಿತ್ತು. ಈ ಬಾರಿ ಕಳೆದ ಬಾರಿಗಿಂತ 21 ಕೋಟಿ ರೂ. ಬಜೆಟ್ ಗಾತ್ರ ಹೆಚ್ಚಾಗಿದೆ‌.