127 ಹೊಸ ಬಸ್‌ಗಳಿಗೆ ಚಾಲನೆ

0
27

ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ ಎಚ್.ಡಿ.ಬಿ.ಆರ್.ಟಿ.ಎಸ್. ಘಟಕದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 27ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಉದ್ಘಾಟಿಸಿದರು. ಈ ವೇಳೆ ನೂತನ ೧೨೭ ಬಸ್‌ಗಳಿಗೆ ಸಚಿವ ರಾಮಲಿಂಗಾರೆಡ್ಡಿ ಲೋಕಾರ್ಪಣೆ ಮಾಡಿದರು. ಈ ಬಸ್​ಗಳು ಭಾರತ್ ಸ್ಟೇಜ್ 6 ಮಾದರಿ ಬಸ್​ಗಳಾಗಿದ್ದು ಇದರಲ್ಲಿ ಸಿಸಿ ಕ್ಯಾಮರಾಗಳು, ಎಲ್‌ಇಡಿ ಸ್ಕ್ರೀನ್​ಗಳು ಮತ್ತು ಸುರಕ್ಷತಾ ಬಟನ್‌ಗಳು ಒಳಗೊಂಡಿವೆ. ರಾಜ್ಯದ ಜನರಿಗೆ ಅತ್ಯುತ್ತಮ ಸಾರಿಗೆ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್‌ಗಳ ಸಂಖ್ಯೆ ಹೆಚ್ಚಿಸಲಾಗುತ್ತಿದೆ. ಅವಧಿ ಮೀರಿದ ಬಸ್​ಗಳನ್ನು ಸ್ಥಗಿತಗೊಳಿಸಿ ಹೊಸ ಬಸ್​ಗಳನ್ನು ಖರೀದಿಸಲಾಗುತ್ತದೆ. ಈ ವರ್ಷವು ಹಳೇ ಬಸ್​ಗಳನ್ನು ಸ್ಕ್ರಾಪ್​ಗೆ ಹಾಕಿ, ಬೇಡಿಕೆ ಮತ್ತು ಸಂಚಾರ ದಟ್ಟಣೆಗೆ ಅನುಗುಣವಾಗಿ ಹೊಸ ಬಸ್‌ಗಳು ಸಂಚರಿಸಲಿವೆ. ಶಾಸಕ ಪ್ರಸಾದ ಅಬ್ಬಯ್ಯ, ಭರಮಗೌಡ ಕಾಗೆ, ಡಿಸಿ ದಿವ್ಯ ಪ್ರಭು ಜೆಆರ್ ಜೆ, ಇತರರು ಇದ್ದರು.

Previous articleಸಭೆಗಳು ಕೇವಲ ಕಾಟಾಚಾರವಲ್ಲದೆ ಮತ್ತೇನಾಗಲು ಸಾಧ್ಯ?
Next articleಪುರುಷರಿಗೆ ಉಚಿತ ಪ್ರಯಾಣ ಪ್ರಸ್ತಾವನೆ ಇಲ್ಲ…