Home ಅಪರಾಧ ಹೈದರಾಬಾದ್‌ನಲ್ಲಿ ಸ್ಫೋಟದ ಸಂಚು: ಇಬ್ಬರು ಶಂಕಿತ ಉಗ್ರರ ಬಂಧನ

ಹೈದರಾಬಾದ್‌ನಲ್ಲಿ ಸ್ಫೋಟದ ಸಂಚು: ಇಬ್ಬರು ಶಂಕಿತ ಉಗ್ರರ ಬಂಧನ

0

ಹೈದರಾಬಾದ್​: ನಗರದಲ್ಲಿ ಬಾಂಬ್ ಸ್ಫೋಟ ಮಾಡಲು ಸಂಚು ರೂಪಿಸಿದ್ದ ಇಬ್ಬರು ಶಂಕಿತ ಉಗ್ರರನ್ನು ತೆಲಂಗಾಣ ಹಾಗೂ ಆಂಧ್ರ ಪ್ರದೇಶ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಐಸಿಸ್ ಜೊತೆ ಸಂಪರ್ಕ ಹೊಂದಿದ್ದ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ. ವಿಜಯನಗರದ ಸಿರಾಜ್ ಉರ್ ರೆಹಮಾನ್ (29) ಮತ್ತು ಸೈಯದ್ ಸಮೀರ್ (28) ಸೌದಿ ಅರೇಬಿಯಾದಲ್ಲಿ ಐಸಿಸ್ ಘಟಕದೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಗಳಿಂದ ಅಮೋನಿಯಾ, ಸಲ್ಫರ್ ಮತ್ತು ಅಲ್ಯೂಮಿನಿಯಂ ಪುಡಿ ಸೇರಿದಂತೆ ಸ್ಫೋಟಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ತೆಲಂಗಾಣ ಪೊಲೀಸರು ಆಂಧ್ರಪ್ರದೇಶ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಹೈದರಾಬಾದ್‌ನಲ್ಲಿ ಬಾಂಬ್ ಸ್ಫೋಟದ ಸಂಚನ್ನು ವಿಫಲಗೊಳಿಸಿದ್ದಾರೆ.

Exit mobile version