Home ಸುದ್ದಿ ದೇಶ ನಾಯಿ ಗಣತಿಗೆ ಖಾಸಗಿ ಶಾಲೆಗಳ ವಿರೋಧ: ನಗರ ಪಾಲಿಕೆಯ ಕೆಲಸ, ಕೆಎಎಂಎಸ್ ಟೀಕೆ

ನಾಯಿ ಗಣತಿಗೆ ಖಾಸಗಿ ಶಾಲೆಗಳ ವಿರೋಧ: ನಗರ ಪಾಲಿಕೆಯ ಕೆಲಸ, ಕೆಎಎಂಎಸ್ ಟೀಕೆ

0

ಶಿಕ್ಷಣ ಸಂಸ್ಥೆಗಳ ಅಸುಪಾಸಿನಲ್ಲಿ ನಾಯಿಗಳ ಸಮೀಕ್ಷೆ ಮಾಡುವಂತೆ ಬೆಂಗಳೂರು ದಕ್ಷಿಣ ನಗರಪಾಲಿಕೆ ಆದೇಶ ಹೊರಡಿಸಿದ್ದರ ಕುರಿತಾಗಿ ತೀವ್ರತರವಾದ ವಿರೋಧ ವ್ಯಕ್ತವಾಗಿದೆ. ಬೆಂಗಳೂರು ದಕ್ಷಿಣ ನಗರಪಾಲಿಕೆಯ ನಿರ್ದೇಶನಕ್ಕೆ ಕರ್ನಾಟಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಅಸೋಸಿಯೇಷನ್‌ನ ಮ್ಯಾನೇಜ್‌ಮೆಂಟ್‌ ಗಳು(ಕೆಎಎಂಎಸ್) ಟೀಕೆ ವ್ಯಕ್ತಪಡಿಸಿವೆ.

ನಗರಪಾಲಿಕೆ ಜವಾಬ್ದಾರಿಯಾಗಿ ಶಾಲೆಗಳಿಗೆ ಮಾಡಬೇಕಾದದಾದ್ದನ್ನು ವರ್ಗಾಯಿಸಲು ಪ್ರಯತ್ನಿಸುತ್ತಿದೆ ಎಂದೂ ಕೂಡ ಕೆಎಎಂಎಸ್‌ ಆರೋಪಿಸಿವೆ. ಈ ನಿರ್ದೇಶನವನ್ನು ಹಿಂಪಡೆಯಬೇಕು ಅಥವಾ ಸಲಹೆಯಾಗಿ ಮಾತ್ರ ಉಳಿಯುವಂತೆ ಮಾಡಬೇಕು ಎಂದು ಸೂಚಿಸಿವೆ.

ಸಾರ್ವಜನಿಕ ಸಂಸ್ಥೆಗಳು ಒಳಗೊಂಡು ಶಾಲಾ-ಕಾಲೇಜುಗಳ ಆವರಣ ಸೇರಿದಂತೆ ಸುತ್ತಮುತ್ತಲೂ ಕೆಲವು ನೀತಿ ನಿಯಮಗಳನ್ನು ಪಾಲಿಸುವಂತೆ ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಬೆಂಗಳೂರು ದಕ್ಷಿಣ ನಗರಪಾಲಿಕೆ ಸುತ್ತೋಲೆ ಹೊರಡಿಸಿತ್ತು.

ಬೀದಿನಾಯಿಗಳ ನುಸುಳುವಿಕೆಯನ್ನು ತಡೆಯಲು ಸಾಕಷ್ಟು ಬೇಲಿ, ತಡೆ ಗೋಡೆಗಳು ಮತ್ತು ಕನಿಷ್ಠ 10 ಅಡಿ ಎತ್ತರದ ಗೇಟ್‌ಗಳನ್ನು ನಿರ್ಮಾಣ ಮಾಡುವುದು ಸೇರಿ ಹಲವು ಮಹತ್ವದ ಸೂಚನೆಗಳನ್ನು ಸೂತೋಲೆಯಲ್ಲಿ ತಿಳಿಸಿತು. ಆದರೆ ಇದನ್ನು ಪಾಲಿಸದಿದ್ದಲ್ಲಿ ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆ ಆಗುವ ಜೊತೆಗೆ ಕಾನೂನು ಪರಿಣಾಮಗಳಿಗೆ ಕಾರಣವಾಗಬೇಕಾಗುತ್ತದೆ ಎಂದು ನಗರಪಾಲಿಕೆ ಸ್ಪಷ್ಟಪಡಿಸಿತ್ತು.

ಆದರೆ, ಈ ನಿರ್ದೇಶನವು ಕರ್ನಾಟಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಅಸೋಸಿಯೇಷನ್‌ನ ಮ್ಯಾನೇಜ್‌ ಮೆಂಟ್‌ಗಳಿಗೆ ಸರಿ ಹೊಂದುವಂತಿಲ್ಲ. ಕಲಿಕೆ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನಮಗೆ ಹಲವು ಕೆಲಸಗಳಿವೆ. ಜೊತೆಗೆ ಕೆಲ ಪಠೇತರ ಕಾರ್ಯವೈಖರಿಗಳು ಈಗಾಗಲೇ ಕಲಿಕೆಯ ಫಲಿತಾಂಶಗಳಿಗೆ ಹಾನಿ ಮಾಡುತ್ತಿವೆ.

ಹಾಗಾಗಿ ಶಾಲಾ ಸಿಬ್ಬಂದಿಗೆ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕೆಲಸದ ಹೊರೆಗಳೇ ಹೆಚ್ಚಾಗಿವೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಈ ಆದೇಶದಂತೆ ಇನ್ನು ಹಲವು ಕೆಲಸ ಕಾರ್ಯಗಳನ್ನು ನಿರ್ವಹಿಸಲು ಅವರನು, ಒತಾಯಿಸುವುದು ಅಧಿಕಾರದ ದುರುಪಯೋಗಕ್ಕೆ ಸಮಾನವಾಗುತ್ತದೆ ಎಂದು ಕೆಎಎಂಎಸ್ ಕಾರ್ಯದರ್ಶಿ ಡಿ.ಶಶಿಕುಮಾ‌ರ್ ಅವರು ಹೇಳುತ್ತಾರೆ.

ಶಾಲೆಗಳೇ ನಿಯಂತ್ರಿಸಬೇಕೆಂಬ ನಿರೀಕ್ಷೆ ಅಪ್ರಸ್ತುತ: ಶಾಲೆಗಳು, ಆಸ್ಪತ್ರೆಗಳು ಮತ್ತು ಇತರೆ ಸಾರ್ವಜನಿಕ ಸ್ಥಳಗಳ ಬಳಿ ಬೀದಿನಾಯಿಗಳು ಹೆಚ್ಚಾಗಲು ಪ್ರಮುಖ ಕಾರಣವೆಂದರೆ, ಈ ಆವರಣಗಳ ಬಳಿಯೇ ತೆರೆದ ಕಸ ವಿಲೇವಾರಿ ಕೈಗೊಳ್ಳುವುದಾಗಿದೆ. ಈ ತ್ಯಾಜ್ಯ ನಿರ್ವಹಣೆ ಕುರಿತಾದ ಸಮಸ್ಯೆಗಳನ್ನು ನಗರಪಾಲಿಕೆಗಳೇ ಬಗೆಹರಿಸಬೇಕೆ ಹೊರತು, ಬೀದಿನಾಯಿಗಳನ್ನು ಶಾಲೆಗಳು ನಿಯಂತ್ರಿಸಬೇಕು ಎಂದು ನಿರೀಕ್ಷಿಸುವುದು ಅಪ್ರಸ್ತುತವಾಗುತ್ತದೆ.

ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಮತ್ತು ಕ್ಯಾಂಪಸ್‌ಗಳಲ್ಲಿ ಬೀದಿನಾಯಿಗಳ ಪ್ರವೇಶವನ್ನು ನಿಯಂತ್ರಿಸಿ ಸಹಕರಿಸಲು ನಗರಪಾಲಿಕೆಗಳು ಮುಂದಾಗಿದ್ದರೂ, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960 ಮತ್ತು ಪ್ರಾಣಿಗಳ ಜನನ ನಿಯಂತ್ರಣ ನಿಯಮಗಳು, 2023ರಿಂದ ಗುರುತಿಸಲ್ಪಟ್ಟಂತೆ ಬೀದಿನಾಯಿಗಳ ನಿಯಂತ್ರಣವು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಬರುತ್ತದೆ.

ಜೊತೆಗೆ ಬೀದಿನಾಯಿಗಳ ಸಮೀಕ್ಷೆಯನ್ನು ಕೈಗೊಳ್ಳಲು ನ್ಯಾಯಾಲಯವು ಯಾವುದೇ ಶಿಕ್ಷಣ ಸಂಸ್ಥೆ ಅಥವಾ ಅದರ ಸಿಬ್ಬಂದಿಗೆ ನಿರ್ದೇಶನ ನೀಡಿಲ್ಲ ಎಂಬುದನ್ನು ಕೆಎಎಂಎಸ್ ಹೇಳುತ್ತಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version