ಹುಲಿ ದತ್ತು ಪಡೆದ ಸಂಯುಕ್ತಾ ಹೊರನಾಡು

0
12

ಬೆಂಗಳೂರು: ಕನ್ನಡ ನಟಿ ಸಂಯುಕ್ತಾ ಹೊರನಾಡು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿನ ಹುಲಿಯೊಂದನ್ನು ದತ್ತು ಪಡೆದಿದ್ದಾರೆ.
ಈ ವಿಷಯವನ್ನು ನಟಿ ಸಂಯುಕ್ತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್‌ನಲ್ಲಿರುವ ಹೆಣ್ಣು ಹುಲಿಯೊಂದನ್ನು ದತ್ತು ಪಡೆದಿದ್ದಾರೆ. ಸಂಯುಕ್ತಾ, ನರದೌರ್ಬಲ್ಯ ಇರುವ ಸಿಂಚನ ಹೆಸರಿನ ಹೆಣ್ಣು ಹುಲಿಯನ್ನು ದತ್ತು ಪಡೆದುಕೊಂಡಿದ್ದಾರೆ. ಸಿಂಚನಾಗೆ 28 ತಿಂಗಳಾಗಿದೆ. ಆರೋಗ್ಯ ಸಮಸ್ಯೆ ಇರುವ ಕಾರಣ, ಅದು ಸ್ವತಂತ್ರ್ಯವಾಗಿ ಕಾಡಿನಲ್ಲಿ ಸುತ್ತಲು ಸಾಧ್ಯವಿಲ್ಲ. ಅದೇ ಕಾರಣಕ್ಕೆ ಬನ್ನೇರುಘಟ್ಟ ಜೈವಿಕ ಉದ್ಯಾನವನ ಅದಕ್ಕೆ ಉದ್ಯಾನವನದಲ್ಲಿ ಆಸರೆ ನೀಡಿದೆ. ಈಗ ಸಂಯುಕ್ತಾ ಅದರ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

Previous articleಯುವತಿ ಮೈ ಮೇಲೆ ಕೈಹಾಕಿದ ಅನ್ಯಮತೀಯ: ಬಂಧನ
Next articleದರ್ಶನ್ ಭೇಟಿಗೆ ಬಂದ ವಿಜಯಲಕ್ಷ್ಮೀ