ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಲಕ್ಷ್ಮೇಶ್ವರಕ್ಕೆ ತೆರಳಿದ ನಟ ಯಶ್

0
17

ಹುಬ್ಬಳ್ಳಿ: ಲಕ್ಷ್ಮೇಶ್ವರ ತಾಲೂಕ ಸೂರಣಗಿ ಗ್ರಾಮದಲ್ಲಿ ರವಿವಾರ ರಾತ್ರಿ ನಡೆದ ದುರ್ಘಟನೆಯಲ್ಲಿ ಮೃತಪಟ್ಟ ಮೂವರು ಅಭಿಮಾನಿಗಳ ಕುಟುಂಬಸ್ಥರನ್ನು ಭೇಟಿಯಾಗಳು ರಾಕಿಂಗ್ ಸ್ಟಾರ್ ಯಶ್ ನಗರದ ವಿಮಾನ ನಿಲ್ದಾಣದಿಂದ ಸೂರಣಗಿಗೆ ತೆರಳಿದರು.

ಶೂಟಿಂಗ್ ಸಲುವಾಗಿ ವಿದೇಶಕ್ಕೆ ತೆರಳಿದ್ದ ನಟ ಯಶ್ ನೇರವಾಗಿ ಗೋವಾಕ್ಕೆ ಆಗಮಿಸಿ, ಅಲ್ಲಿಂದ ವಿಶೇಷ ವಿಮಾನ ಮೂಲಕ ನಗರಕ್ಕೆ ಆಗಮಿಸಿ ಸೂರಣಗಿಗೆ ತೆರಳಿದರು.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಯಶ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರವೇರಿದ್ದರು.

Previous articleಬಿಲ್ಕಿಸ್ ಬಾನೋ ಪ್ರಕರಣ: ಸರಕಾರದ ಆದೇಶ ರದ್ದು ಮಾಡಿದ ಸುಪ್ರೀಂ ಕೋರ್ಟ್
Next articleಸೀಮಂತ ಕಾರ್ಯಕ್ರಮದಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಲು ಜಾಗೃತಿ