ಹುಬ್ಬಳ್ಳಿ-ಪ್ರಯಾಗ್‌ರಾಜ್-ವಾರಣಾಸಿ ನಡುವೆ ವಿಶೇಷ ರೈಲು

0
26

ಹುಬ್ಬಳ್ಳಿ: ಕುಂಭಮೇಳದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಪೂರೈಸಲು, ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ರೈಲ್ವೆ ನಿಲ್ದಾಣ ಹಾಗೂ ಉತ್ತರ ಪ್ರದೇಶದ ವಾರಣಾಸಿ ನಿಲ್ದಾಣಗಳ ನಡುವೆ ೩ ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ ಎಂದು ನೈಋತ್ಯ ರೈಲ್ವೆ ವಲಯ ತಿಳಿಸಿದೆ.
3 ಟ್ರಿಪ್ ವಿಶೇಷ ರೈಲುಗಳ ವಿವರಗಳು ಈ ಕೆಳಗಿನಂತಿವೆ:
ಹುಬ್ಬಳ್ಳಿ-ವಾರಣಾಸಿ ನಿಲ್ದಾಣಗಳ ನಡುವೆ ಮೂರು ಟ್ರಿಪ್ ವಿಶೇಷ ರೈಲು (೦೭೩೮೩/೮೪) ಸಂಚಾರ
ಎಸ್‌ಎಸ್‌ಎಸ್ ಹುಬ್ಬಳ್ಳಿ-ವಾರಣಾಸಿ ವಿಶೇಷ ಎಕ್ಸ್ಪ್ರೆಸ್ ರೈಲು (ರೈಲು ಸಂಖ್ಯೆ ೦೭೩೮೩) ಫೆಬ್ರವರಿ ೧೪, ೨೧ ಮತ್ತು ೨೮ ರಂದು ಹುಬ್ಬಳ್ಳಿಯಿಂದ ಬೆಳಿಗ್ಗೆ ೮ ಗಂಟೆಗೆ ಹೊರಟು, ಭಾನುವಾರದಂದು ಬೆಳಿಗ್ಗೆ ೫.೩೦ಕ್ಕೆ ಉತ್ತರ ಪ್ರದೇಶದ ವಾರಣಾಸಿ ನಿಲ್ದಾಣ ತಲುಪಲಿದೆ.
ಪುನಃ ಇದೇ ರೈಲು (೦೭೩೮೪) ಫೆಬ್ರವರಿ ೧೭, ೨೪ ಮತ್ತು ಮಾರ್ಚ್ ೩ ರಂದು ವಾರಣಾಸಿಯಿಂದ ಬೆಳಿಗ್ಗೆ ೫ ಗಂಟೆಗೆ ಹೊರಟು, ಬುಧವಾರ ೧೨.೪೫ ಗಂಟೆಗೆ ಎಕ್ಸಪ್ರೆಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.
ಈ ರೈಲು ಎರಡೂ ಮಾರ್ಗಗಳಲ್ಲಿ ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ, ಬೆಳಗಾವಿ, ಗೋಕಾಕ್ ರೋಡ್, ಘಟಪ್ರಭಾ, ರಾಯಬಾಗ, ಕುಡಚಿ, ಮಿರಜ್, ಸಾಂಗ್ಲಿ, ಕಿರ್ಲೋಸ್ಕರವಾಡಿ, ಕರಾಡ್, ಸತಾರಾ, ಪುಣೆ, ದೌಂಡ್ ಕಾರ್ಡ್ ಲೈನ್, ಅಹ್ಮದ್ನಗರ, ಕೋಪರಗಾಂವ್, ಮನ್ಮಾಡ್, ಭೂಸಾವಲ್, ತಲ್ವಾಡ್ಯ, ಛನೆರಾ, ಖಿರ್ಕಿಯಾ, ಹರ್ದಾ, ಬಾನಾಪುರಾ, ಇಟಾರ್ಸಿ, ಪಿಪರಿಯಾ, ನರಸಿಂಗಪುರ, ಜಬಲ್ಪುರ, ಕಟ್ನಿ, ಮೈಹಾರ್, ಸತ್ನಾ, ಮಾಣಿಕಪುರ, ಪ್ರಯಾಗ್‌ರಾಜ್ ಚಿಯೋಕಿ, ಮಿರ್ಜಾಪುರ ಮತ್ತು ಚುನಾರ್ ನಿಲ್ದಾಣಗಳಲ್ಲಿ ನಿಲ್ಲಲಿದೆ.
ಬೋಗಿಗಳ ಸಂಯೋಜನೆ: ಈ ರೈಲುಗಳು ೧ ಎಸಿ ಟು ಟೈರ್, ೪ ಎಸಿ ತ್ರಿ ಟೈರ್, ೧೧ ಸ್ಲೀಪರ್ ಕ್ಲಾಸ್, ೧ ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಗಾರ್ಡ್ ಬ್ರೇಕ್ ವ್ಯಾನ್ ಮತ್ತು ೧ ಲಗೇಜ್/ಜನರೇಟರ್/ಬ್ರೇಕ್ ವ್ಯಾನ್ ಸೇರಿದಂತೆ 18 ಬೋಗಿಗಳನ್ನು ಒಳಗೊಂಡಿರುತ್ತದೆ.
ಈ ರೈಲುಗಳ ಪ್ರತಿ ನಿಲ್ದಾಣದ ಆಗಮನ, ನಿರ್ಗಮನ ಸಮಯಕ್ಕಾಗಿ, ಪ್ರಯಾಣಿಕರು ಭಾರತೀಯ ರೈಲ್ವೆ ಜಾಲತಾಣಕ್ಕೆ ಭೇಟಿ ನೀಡಿ ಅಥವಾ ಸಹಾಯವಾಣಿ 139ಕ್ಕೆ ಕರೆ ಮಾಡುವ ಮೂಲಕ ಮಾಹಿತಿ ಪಡೆದುಕೊಳ್ಳಬಹುದು ಎಂದು ನೈಋತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ತಿಳಿಸಿದ್ದಾರೆ.

Previous articleವಿವಿಧೆಡೆ ಚಿಕನ್ ಪಾಕ್ಸ್ ಆತಂಕ: ಕಡಬ ತಾಲೂಕಿನಲ್ಲೇ 21 ಪ್ರಕರಣ
Next articleಮಂತ್ರ ಮಾಂಗಲ್ಯ ವಿವಾಹ ಪ್ರೋತ್ಸಾಹಿಸೋಣ