ಹುಬ್ಬಳ್ಳಿಯಲ್ಲಿ ಪಾಕ್ ಮೂಲದ ಮಹಿಳೆ, ಸರ್ಕಾರಕ್ಕೆ ವರದಿ

0
40

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಪಾಕ್ ಮೂಲದ ಕ್ರಿಶ್ಚಿಯನ್ ಮಹಿಳೆ ಇದ್ದು, ಅವರ ಕುರಿತು ಸರಕಾರಕ್ಕೆ ವರದಿ ಕೊಡಲಾಗಿದೆ. ಸರಕಾರದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಹೇಳಿದರು.
ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ೨೦೧೬ರಲ್ಲಿ ಪಾಕಿಸ್ತಾನದ ಕಚ್ ಮೂಲದ ಮಹಿಳೆ ಹುಬ್ಬಳ್ಳಿಯ ಕ್ರಿಶ್ಚಿಯನ್ ವ್ಯಕ್ತಿಯನ್ನು ಮದುವೆಯಾಗಿ ನೆಲೆಸಿದ್ದಾರೆ. ಅವರಿಗೆ ಎರಡು ಮಕ್ಕಳು ಇದ್ದಾರೆ. ದೀರ್ಘಾವಧಿ ವೀಸಾದ ಮೇಲೆ ಹುಬ್ಬಳ್ಳಿಯಲ್ಲಿದ್ದು, ಅವರ ಕುರಿತು ಎಲ್ಲ ಮಾಹಿತಿಯನ್ನು ಸರಕಾರಕ್ಕೆ ಹಾಗೂ ಹಿರಿಯ ಅಧಿಕಾರಿಗಳಿಗೆ ಕೊಡಲಾಗಿದೆ. ಸರಕಾರ ಹಾಗೂ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Previous article12ರಂದು `ಆಪರೇಷನ್ ಅಭ್ಯಾಸ್’ ಅಣಕು ಕಾರ್ಯಾಚರಣೆ
Next articleಯುದ್ಧದ ಸಮಯದ ಹಿಂಸೆ ಹಿಂಸೆಯಲ್ಲ