Home ನಮ್ಮ ಜಿಲ್ಲೆ ಉಡುಪಿ ಹಿರಿಯ ಬಿಜೆಪಿ ಮುಖಂಡ ಸುಧಾಕರ ಶೆಟ್ಟಿ ನಿಧನ

ಹಿರಿಯ ಬಿಜೆಪಿ ಮುಖಂಡ ಸುಧಾಕರ ಶೆಟ್ಟಿ ನಿಧನ

0

ಉಡುಪಿ: ಉಡುಪಿಯ ಹಿರಿಯ ಬಿಜೆಪಿ ಮುಖಂಡ ಸುಧಾಕರ ಶೆಟ್ಟಿ ಇಂದು ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ರಾಜಕೀಯ ಹಾಗೂ ಹೊಟೇಲ್ ಉದ್ಯಮದಲ್ಲಿ ಹೆಚ್ಚು ಹೆಸರುವಾಸಿಯಾಗಿದ್ದ ಇವರು ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಮೂರು ಬಾರಿ ಉಡುಪಿ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸುಧಾಕರ ಶೆಟ್ಟಿ, ಎರಡು ಬಾರಿ ಬಿಜೆಪಿ ಹಾಗೂ ಒಂದು ಬಾರಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಆದರೆ ಮೂರು ಚುನಾವಣೆಯಲ್ಲೂ ಇವರು ಸೋಲು ಅನುಭವಿಸಿದ್ದರು. 2009 ರಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು.

Exit mobile version