Home ನಮ್ಮ ಜಿಲ್ಲೆ ಹಿಂದೂ ವಿರೋಧಿ ವೈರಸ್ ಕಾಂಗ್ರೆಸ್‌ನಲ್ಲಿ ಕರೋನಾದಂತೆ ವ್ಯಾಪಿಸುತ್ತಿದೆ

ಹಿಂದೂ ವಿರೋಧಿ ವೈರಸ್ ಕಾಂಗ್ರೆಸ್‌ನಲ್ಲಿ ಕರೋನಾದಂತೆ ವ್ಯಾಪಿಸುತ್ತಿದೆ

0
ಹಿಂದೂ ವಿರೋಧಿ ವೈರಸ್ ಕಾಂಗ್ರೆಸ್‌ನಲ್ಲಿ ಕರೋನಾದಂತೆ ವ್ಯಾಪಿಸುತ್ತಿದೆ

ಬೆಂಗಳೂರು: ಹಿಂದೂ ವಿರೋಧಿ ವೈರಸ್ ಕಾಂಗ್ರೆಸ್ ನಲ್ಲಿ ಕರೋನಾದಂತೆ ವ್ಯಾಪಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಹುಬ್ಬಳ್ಳಿ ಪ್ರಕರಣ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು “ದಿನದಿಂದ ದಿನಕ್ಕೆ ಹಿಂದೂ ವಿರೋಧಿ ವೈರಸ್ ಕಾಂಗ್ರೆಸ್ ನಲ್ಲಿ ಕರೋನಾದಂತೆ ವ್ಯಾಪಿಸುತ್ತಿದೆ”. ಮೊನ್ನೆಯಷ್ಟೇ ಮಾಜಿ ಸಚಿವ ಹೆಚ್ ಆಂಜನೇಯ ಅವರಿಂದ ಶ್ರೀರಾಮನ ಅಪಹಾಸ್ಯ, ನಿನ್ನೆ ಹುಬ್ಬಳ್ಳಿಯಲ್ಲಿ ಕರ ಸೇವಕನ ಬಂಧನ, ಇಂದು ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರಿಂದ ಭಯೋತ್ಪಾದಕ ಹೇಳಿಕೆ, ಇದರ ಬೆನ್ನಲ್ಲೇ ಸಿಎಂ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಂದ ‘ಹಿಂದೂ ರಾಷ್ಟ್ರ ಕಲ್ಪನೆಗೆ ಪ್ರತಿರೋಧ’, ಈ ಘಟನೆಗಳನ್ನು ಅವಲೋಕಿಸುತ್ತಿದ್ದರೆ, ಲೋಕಸಭಾ ಚುನಾವಣೆಯ ಒಳಗೆ ಕರ್ನಾಟಕದಲ್ಲಿ ಕೋಮು ದಳ್ಳುರಿಗೆ ಕಾಂಗ್ರೆಸ್ ವ್ಯವಸ್ಥಿತ ಪಿತೂರಿ ನಡೆಸುತ್ತಿರುವಂತಿದೆ. ಇದರ ಜತೆ ಜತೆಗೆ ತನ್ನ ಹಿಂದೂ ವಿರೋಧಿ ಧಮನಕಾರಿ ಧೋರಣೆಗಳನ್ನು ಮುಂದುವರಿಸುವ ಎಲ್ಲ ಷಡ್ಯಂತ್ರಗಳು ಎದ್ದು ಕಾಣುತ್ತಿವೆ. ರಾಜ್ಯದ ಜನತೆ ಸೂಕ್ತ ಉತ್ತರ ನೀಡುವ ಕಾಲ ಸನ್ನಿಹಿತವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.