ಹಸಿರು ಕ್ರಾಂತಿ ಪಿತಾಮಹ ಎಂಎಸ್ ಸ್ವಾಮಿನಾಥನ್ ಇನ್ನಿಲ್ಲ

0
16

ಚೆನ್ನೈ: ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂದೇ ಪ್ರಖ್ಯಾತರಾದ ಡಾ. ಮೊಂಕೊಂಬ ಸಾಂಬಶಿವನ್ ಸ್ವಾಮಿನಾಥನ್(98) ಅವರು ಚೆನ್ನೈನಲ್ಲಿ ನಿಧರಾಗಿದ್ದಾರೆ. ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂದೇ ಪ್ರಖ್ಯಾತರಾದ ಡಾ. ಮೊಂಕೊಂಬ ಸಾಂಬಶಿವನ್ ಸ್ವಾಮಿನಾಥನ್ ಅವರು ಚೆನ್ನೈನಲ್ಲಿ ನಿಧರಾಗಿದ್ದಾರೆ. ಭಾರತದಲ್ಲಿ ತೀವ್ರ ಧಾನ್ಯದ ಕೊರತೆ ಉಂಟಾದಾಗ, ಅವರು ಹೊಲಗಳಲ್ಲಿ ಸುಧಾರಿತ ಬೀಜಗಳನ್ನು ಬೆಳೆಸಿದರು ಮತ್ತು ರೈತರಿಗೆ ಹೆಚ್ಚಿನ ಇಳುವರಿ ಪಡೆಯುವ ಮಾರ್ಗವನ್ನು ತೋರಿಸಿದರು. ಅವರ ಕೊಡುಗೆಯ ಫಲವಾಗಿ ಕೇವಲ 25 ವರ್ಷಗಳಲ್ಲಿ ಭಾರತೀಯ ರೈತರನ್ನು ಕೃಷಿಯಲ್ಲಿ ಸ್ವಾವಲಂಬಿಗಳನ್ನಾಗಿ ಮಾಡಿ ಹಸಿರು ಕ್ರಾಂತಿಯ ಹರಿಕಾರರೆನಿಸಿಕೊಂಡರು.
ಚೆನ್ನೈನಲ್ಲಿ ವಾಸವಿದ್ದ ಅವರು ವಯೋಸಹಜವಾಗಿ ಇಂದು ಸಾವನ್ನಪ್ಪಿದ್ದಾರೆ. ಎಂಎಸ್ ಸ್ವಾಮಿನಾಥನ್ ಅವರ ಪತ್ನಿ ಮಿನಾ ಸ್ವಾಮಿನಾಥನ್​ ಅವರು ಕಳೆದ ವರ್ಷ ನಿಧನರಾಗಿದ್ದರು. ಸ್ವಾಮಿನಾಥನ್​ ಅವರು ಈಗ ಮೂವರು ಪುತ್ರಿಯರಾದ ಸೌಮ್ಯ ಸ್ವಾಮಿನಾಥನ್, ಮಥುರಾ ಸ್ವಾಮಿನಾಥನ್ ಮತ್ತು ನಿತ್ಯ ಸ್ವಾಮಿನಾಥನ್ ಅವರನ್ನು ಅಗಲಿದ್ದಾರೆ.

Previous articleಗಣೇಶನಿಗೆ ಕೈಹಿಡಿದ ಮುಂಗಾರು ಮಳೆ
Next articleಭಾರತಕ್ಕೆ ಸ್ವರ್ಣ: ಪ್ರಧಾನಿ ಮೋದಿ ಅಭಿನಂದನೆ