ಹವಾಮಾನ ವೈಪರೀತ್ಯ: ಬೆಂಗಳೂರಿಗೆ ವಾಪಾಸ್ ಆದ ರಾಜ್ಯಪಾಲರು

0
52

ಬಳ್ಳಾರಿ: ಹವಾಮಾನ ವೈಪರೀತ್ಯ ಹಿನ್ನೆಲೆ, ರಾಯಚೂರು ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿದ್ದ ರಾಜ್ಯಪಾಲ ಥಾವರ್ ಚಂದ್ ಗೇಹ್ಲೋಟ್ ಅವರು ಜಿಂದಾಲ್‌ ಏರ್ಪೋರ್ಟ್‌ನಲ್ಲಿಯೇ ಉಳಿದಿದ್ದಾರೆ. ಬೆಂಗಳೂರು ವಿಶೇಷ ವಿಮಾನದಲ್ಲಿ ಜಿಂದಾಲ್‌ ಏರ್ಪೋರ್ಟ್‌ಗೆ ಬಂದಿದ್ದ ರಾಜ್ಯಪಾಲರು, ಜಿಂದಾಲ್‌ನಿಂದ ಹೆಲಿಕಾಪ್ಟರ್‌‌ನಲ್ಲಿ ರಾಯಚೂರಿಗೆ ತೆರಳಬೇಕಿತ್ತು. ಹವಾಮಾನ ವೈಪರೀತ್ಯ ಹಿನ್ನೆಲೆ ಹೆಲಿಕಾಪ್ಟರ್ ಹಾರಲು ಅನುಕೂಲವಾಗಿಲ್ಲ. ಹೀಗಾಗಿ ಜಿಂದಾಲ್‌ನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಘಟಿಕೋತ್ಸವದಲ್ಲಿ ಭಾಗಿಯಾದ ರಾಜ್ಯಪಾಲರು ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ವಾಪಸ್ ಹೊರಡಲಿದ್ದಾರೆ.

Previous articleನೀತಿ ಆಯೋಗ ಸಭೆಗೆ ಸಿಎಂ ಗೈರು: ಮಹಾ ಅಪರಾಧ
Next articleಪುತ್ತಿಗೆ ಎರುಗುಂಡಿ ಫಾಲ್ಸ್: ಪ್ರವಾಸಿಗರ ರಕ್ಷಣೆ