ಹರಿಯಾಣ ಚುನಾವಣೆ ಪಾಠ ಕಲಿಸಿದೆ

0
51
DKC

ಹುಬ್ಬಳ್ಳಿ: ಜಮ್ಮು-ಕಾಶ್ಮೀರ ಗೆಲ್ಲುವ ಬಗ್ಗೆ ನಮಗೆ ವಿಶ್ವಾಸ ಇತ್ತು. ಹರಿಯಾಣದಲ್ಲೂ ನಾವು ಗೆಲ್ಲಬೇಕಾಗಿತ್ತು. ಆದರೆ, ಜನರ ತೀರ್ಮಾನ ಬೇರೆಯಾಗಿತ್ತು ಎಂದು ಡಿಸಿಎಂ ಡಿ.ಕೆ. ಶಿವಕುಮಾರ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ರಾಜ್ಯಗಳ ಚುನಾವಣೆ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿತ್ತು. ಹರಿಯಾಣ ಚುನಾವಣೆ ನಮಗೆಲ್ಲ ಪಾಠ ಕಲಿಸಿದೆ. ನಾಳೆ ನಮ್ಮ ನಾಯಕರು ಈ ಸಂಬಂಧ ಸಭೆ ನಡೆಸಲಿದ್ದಾರೆ. ನಾವು ಯಾವತ್ತೂ ಎಕ್ಸಿಟ್ ಪೋಲ್ ನಂಬೋದಿಲ್ಲ. ಹಿಂದೆಯೂ ನಂಬಿಲ್ಲ ಮುಂದೆಯೂ ನಂಬೋದಿಲ್ಲ ಎಂದರು.

Previous articleಮುಮ್ತಾಝ್ ಅಲಿ ಆತ್ಮಹತ್ಯೆ ಪ್ರಕರಣ: ಮೂವರು ವಶಕ್ಕೆ
Next articleಹರಿಯಾಣ ಗೆಲುವಿಗೆ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ