ಮಂಗಳೂರು: ಆನ್‌ಲೈನ್ ಆಹಾರ ಡೆಲಿವರಿ ಕಂಪನಿಯ ಮಂಗಳೂರಿನ ಎಕ್ಸಿಕ್ಯೂಟಿವ್‌ಗಳು ಮಂಗಳೂರಿನಲ್ಲಿಂದು ಪ್ರತಿಭಟನೆ ನಡೆಸಿದರು. ಆಹಾರ ಪೂರೈಕೆಯ ಕಮಿಷನ್ ನೀಡದೇ ಇರುವುದು, ಅಧಿಕ ಕೆಲಸದ ಒತ್ತಡ ಮುಂತಾದ ಕಾರಣ ಆರೋಪಿಸಿ ಡೆಲಿವರಿ ಬಾಯ್‌ಗಳು ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳೂರಿನ ಕುಂಟಿಕಾನ ಬಳಿ ಸ್ವಿಗ್ಗಿ ಕಂಪನಿಯ ಕಚೇರಿ ಎದುರು ಡೆಲಿವರಿ ಬಾಯ್‌ಗಳು ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು.