ಸೈಂಟಿಸ್ಟ್ ಮಂಜ್ಯಾ ಸೇರಿ ಇನ್ನಿಬ್ಬರ ಬಂಧನ

0
29

ಹುಬ್ಬಳ್ಳಿ: ಕೊಲೆ, ಸುಲಿಗೆ, ದರೋಡೆ ಸೇರಿದಂತೆ ವಿವಿಧ ಪ್ರಕರಣದಲ್ಲಿ ಬೇಕಾಗಿದ್ದ ಕುಖ್ಯಾತ ಆರೋಪಿ ಮಂಜುನಾಥ ಉರ್ಫ ಸೈಂಟಿಸ್ಟ್ ಮಂಜ್ಯಾ ಭಂಡಾರಿ  ಮತ್ತು ಇನ್ನಿಬ್ಬರ ಬಂಧನ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ ತಿಳಿಸಿದರು.

ರವಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಗೋಪನಕೊಪ್ಪದ ಶಿವಕಾಲೋನಿಯ ಕುಖ್ಯಾತ ಆರೋಪಿ ಮಂಜುನಾಥ @ ಸೈಂಟಿಸ್ಟ್ ಮಂಜ್ಯಾ ಬಂಡಾರಿಯನ್ನು ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದರು.
ಅಬ್ದುಲಖಾದರ ಕುಂದಗೋಳ ಎಂಬುವರ ಮೇಲೆ ಕೊಲೆಗೆ ಯತ್ನಿಸಿದ್ದನು. ಸಾಥ್ ನೀಡಿದ ಮಾಲಾ ಹಾಗೂ ಮುಸ್ಕಾನ್ ಎಂಬುವರನ್ನು ಬಂಧಿಸಲಾಗಿದೆ.
ಆರೋಪಿ ಮಂಜುನಾಥ @ ಸೈಂಟಿಂಟ್ ಮಂಜ್ಯಾ ಬಂಡಾರಿ ಈತನು ಈ ಹಿಂದೆ ಕೊಲೆ, ಕೊಲೆ ಯತ್ನ, ಧರೋಡೆ, ಮನೆಗಳ್ಳತನ, ಹಲ್ಲೆ ಪ್ರಕರಣ, ಎನ್‌ಡಿಪಿಎಸ್ ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ ಈತನ ಮೇಲೆ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ 30 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದರು.
ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ್ ಸಿ.ಆರ್. ಇದ್ದರು‌.

Previous articleಕ್ರೂಸರ್ ಅಪಘಾತ: ಮೃತರ ಸಂಖ್ಯೆ ಮೂರಕ್ಕೆ ಏರಿಕೆ
Next articleನಾನು ಸಿಎಂ, ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿ