ಸೇನಾ ನೇಮಕಾತಿ ರ‌್ಯಾಲಿಗೆ ಚಾಲನೆ

0
17

ಕೊಪ್ಪಳ: ಭಾರತೀಯ ಸೇನಾ ನೇಮಕಾತಿ ಕಚೇರಿ ಮತ್ತು ಜಿಲ್ಲಾಡಳಿತದ ಆಶ್ರಯದಲ್ಲಿ ಆಯೋಜಿಸಲಾದ ಸೇನಾ ನೇಮಕಾತಿ ರ‌್ಯಾಲಿಗೆ ಮಂಗಳವಾರ ಜಿಲ್ಲಾಧಿಕಾರಿ ನಲಿನ್ ಅತುಲ್ ಚಾಲನೆ ನೀಡಿದರು.

ಬೆಳಗಾವಿ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಬೀದರ್ ಜಿಲ್ಲೆಗಳ ೯ ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಲಿದ್ದು, ಈ ಪೈಕಿ ಮಂಗಳವಾರ ಬೆಳ್ಳಂ ಬೆಳಿಗ್ಗೆ ಕೊರೆಯುವ ಚಳಿಯಲ್ಲಿ ರ‌್ಯಾಲಿಗೆ ಆಗಮಿಸಿದರು. ಅಭ್ಯರ್ಥಿಗಳ ಮಾಹಿತಿ ಮತ್ತು ದಾಖಲೆಗಳನ್ನು ಪರಿಶೀಲನೆ ಮಾಡಿದರು. ೧೦೦ ಅಭ್ಯರ್ಥಿಗಳ ತಂಡಗಳನ್ನು ಮಾಡಿ, ಓಟ, ದೈಹಿಕ ದಾರ್ಢ್ಯತೆ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ಮಾಡಲಾಗುತ್ತಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ಧಿ, ಬೆಳಗಾವಿ ಸೇನಾ ನೇಮಕಾತಿ ಅಧಿಕಾರಿ ಮೇಜರ್ ವಿಶ್ವನಾಥ, ಸುಬೇದಾರ ಮೇಜರ್ ಡಿ.ಆರ್.ಲೋಹಿಯಾ ಮತ್ತು ಸುಬೇದಾರ ಮಲಕೀತ್ ಸಿಂಗ್ ಇದ್ದರು.

Previous articleಬಿಜೆಪಿ ಸ್ಥಾನ ಕಸಿದುಕೊಂಡ ಕಾಂಗ್ರೆಸ್
Next articleಜಿಮ್ಸ್ ಆಸ್ಪತ್ರೆಯಲ್ಲಿ ನವಜಾತ ಶಿಶು ಅಪಹರಣ: ಇಲಾಖಾ ವಿಚಾರಣೆಗೆ ಆದೇಶ