ಸಿಬಿಎಸ್‌ಇ: ೨ ಬಾರಿ ಬೋರ್ಡ್ ಪರೀಕ್ಷೆ

0
6

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇನ್ (ಸಿಬಿಎಸ್‌ಇ) ೨೦೨೪-೨೫ನೇ ಶೈಕ್ಷಣಿಕ ವರ್ಷದಿಂದಲೇ ಎರಡು ಬಾರಿ ಬೋರ್ಡ್ ಪರೀಕ್ಷೆ ಪದ್ಧತಿಯನ್ನು ಜಾರಿಗೆ ತಂದಿದೆ. ಸಿಬಿಎಸ್‌ಇ ೧೦ ಮತ್ತು ೧೨ನೇ ತರಗತಿಯ ವಿದ್ಯಾರ್ಥಿಗಳು ವರ್ಷದಲ್ಲಿ ಎರಡು ಬಾರಿ ಪರೀಕ್ಷೆಗಳನ್ನು ಬರೆಯಬೇಕಾಗುತ್ತದೆ. ಆದರೆ ಈ ವ್ಯವಸ್ಥೆ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿರುವುದಿಲ್ಲ.
ಒಂದೇ ಅವಕಾಶದಲ್ಲಿ ಪರೀಕ್ಷೆ ಬರೆದು ಉತ್ತೀರ್ಣರಾಗುವ ಬಗ್ಗೆ ಭಯ, ಆತಂಕದಲ್ಲಿರುವ ವಿದ್ಯಾರ್ಥಿಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಸಲುವಾಗಿ ಈ ವ್ಯವಸ್ಥೆಯನ್ನು ಜಾರಿಗೆ ತಂದಿರುವ ಉದ್ದೇಶವಾಗಿದೆ. ಅಭ್ಯರ್ಥಿಯು ಮೊದಲ ಅವಧಿಯ ಪರೀಕ್ಷೆಯಲ್ಲಿ ಬಂದ ಅಂಕಗಳಿಗೆ ತೃಪ್ತರಾಗಿದ್ದರೆ ಅವರು ೨ನೇ ಪರೀಕ್ಷೆಗೆ ಹಾಜರಾಗುವ ಅವಶ್ಯಕತೆ ಇರುವುದಿಲ್ಲ. ಎರಡು ಪರೀಕ್ಷೆಗಳನ್ನು ಬರೆಯಬೇಕಾ, ಇಲ್ಲವೇ ಒಂದೇ ಸಾಕೇ ಎಂಬುದರ ನಿರ್ಧಾರವನ್ನು ವಿದ್ಯಾರ್ಥಿಗಳಿಗೆ ಬಿಡಲಾಗಿದೆ.

Previous articleಹಣದುಬ್ಬರ ಆತಂಕದ ನಡುವೆ ಪ್ರಗತಿ ಉದ್ದೀಪಿಸುವ ಸವಾಲು
Next articleವಾಣಿಜ್ಯ ತೆರಿಗೆ ಅಧಿಕಾರಿ ಮನೆಯ ಮೇಲೆ ಲೋಕಾಯುಕ್ತ ದಾಳಿ