Home ಸುದ್ದಿ ದೇಶ ಸಿದ್ಧಾರೂಢ ಮಠ ಪುನರಾಭಿವೃದ್ಧಿಗೆ ಪ್ರಸ್ತಾವನೆ

ಸಿದ್ಧಾರೂಢ ಮಠ ಪುನರಾಭಿವೃದ್ಧಿಗೆ ಪ್ರಸ್ತಾವನೆ

0

ನವದೆಹಲಿ: ಸಿದ್ಧಾರೂಢ ಮಠ ಪುನರಾಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಕೇಂದ್ರ ಸರಕಾರದ ಪ್ರವಾಸೋದ್ಯಮ ಇಲಾಖೆಯ “ಪ್ರಸಾದ್ ಯೋಜನೆ” ಯಡಿ ಹುಬ್ಬಳ್ಳಿಯ ಜಗದ್ಗುರು ಶ್ರೀ ಸಿದ್ಧಾರೂಢ ಮಠವನ್ನು ಪುನರಾಭಿವೃದ್ಧಿ ಮಾಡುವಂತೆ ಮಠದ ಆಡಳಿತ ಮಂಡಳಿಯ ಸದಸ್ಯರು ದೆಹಲಿಗೆ ಆಗಮಿಸಿದ್ದರು. ಸದಸ್ಯರೊಂದಿಗೆ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರನ್ನು ಭೇಟಿಯಾಗಿ ಪ್ರಸ್ತಾವನೆ ಸಲ್ಲಿಸಲಾಯಿತು. ನಮ್ಮ ಪ್ರಸ್ತಾವನೆಗೆ ಸ್ಪಂದಿಸಿದ ಸಚಿವರು, ಈ ಬಗ್ಗೆ ಮಾಹಿತಿ ಪಡೆದು ಪರಿಶೀಲಿಸಿ ಶ್ರೀ ಕ್ಷೇತ್ರದ ಅಭಿವೃದ್ಧಿ ಮಾಡಲಾಗುವುದು ಎಂದು ಭರವಸೆ ನೀಡಿದರು ಎಂದು ಬರೆದುಕೊಂಡಿದ್ದಾರೆ.

Exit mobile version