ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯಲು ಹೋರಾಟ ಅಗತ್ಯ

0
25

ದಾವಣಗೆರೆ: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಮುಂದುವರಿಯಬೇಕಾದರೆ ನಾವು ಹೋರಾಟ ಮಾಡಬೇಕಿದೆ ಎಂದು ಹೇಳುವ ಮೂಲಕ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ತಮ್ಮ ತಂದೆ ಎರಡೂವರೆ ವರ್ಷಕ್ಕಷ್ಟೇ ಸಿಎಂ ಎಂಬುದಾಗಿ ಪರೋಕ್ಷ ಸಾರಿದ್ದಾರೆ.

ತಾಲೂಕಿನ ರುದ್ರನಕಟ್ಟೆ ಗ್ರಾಮದಲ್ಲಿ ಬುಧವಾರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಟಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಐದು ವರ್ಷ ಕಾಲ ಮುಖ್ಯಮಂತ್ರಿಯಾಗಿರಬೇಕೆಂದರೆ ನಾವೆಲ್ಲರೂ ಒಗ್ಗಟ್ಟಾಗಬೇಕಿದೆ. ಅಹಿಂದ ವರ್ಗಕ್ಕೆ ಹಿಂದೆಲ್ಲಾ ಸಾಕಷ್ಟು ಕೊಡುಗೆ ನೀಡಿದ ಸಿದ್ದರಾಮಯ್ಯ ಪರ ನಾವು ಹೋರಾಟ ಮಾಡಬೇಕಿದೆ ಎಂದು ಕರೆ ನೀಡಿದ್ದಾರೆ.

Previous articleಹಿಂದೂ ವಿರೋಧಿ ವೈರಸ್ ಕಾಂಗ್ರೆಸ್‌ನಲ್ಲಿ ಕರೋನಾದಂತೆ ವ್ಯಾಪಿಸುತ್ತಿದೆ
Next articleಭಾರತ ಹಿಂದುರಾಷ್ಟ್ರವಾದರೆ ದೊಡ್ಡ ಅಪಾಯ