ಸಿಡಿಲು ಬಡಿದು ಇಬ್ಬರು ಸಾವು

ಸಿಡಿಲು

ರಾಯಚೂರು: ಸಿಡಿಲು ಬಡೆದು ಇಬ್ಬರು ಸಾವನ್ನಪ್ಪಿದ ಪ್ರತ್ಯೇಕ ಘಟನೆ ಶುಕ್ರವಾರ ರಾಯಚೂರು ತಾಲ್ಲೂಕಿನಲ್ಲಿ ನಡೆದಿದೆ.
ಜಿಲ್ಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಮಳೆ ಸುರಿದಿದ್ದು, ತಾಲೂಕಿನ ಉಡುಮಗಲ್ ಖಾನಾಪುರದಲ್ಲಿ ಕುರಿ ಕಾಯುತ್ತಿದ್ದ ಮಹಿಳೆ ತನಗಲ್ ಮಲ್ಲಮ್ಮ (45) ಎಂಬುವವರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಕೈಯಲ್ಲಿದ್ದ ಬುತ್ತಿ ಡಬ್ಬಿ ಸೀಳಿ ಹೋಗಿದೆ. ರಾಯಚೂರು ತಾಲೂಕಿನ ಮರ್ಚೆಟ್ಹಾಳ್ ಗ್ರಾಮದಲ್ಲಿ ಗಿಡ ಕಡಿಸಲು ಹೊಲಕ್ಕೆ ಹೋಗಿದ್ದ ಹನುಮಂತ ಯಾದವ್(44) ಎಂಬುವವರು ಸಿಡಿಲು ಬಡಿದು ಮೃತಪಟ್ಟಿದ್ದಾನೆ.