ಸಿಡಿಲು ಬಡಿದು ತಂದೆ ಸಾವು, ಮಗನಿಗೆ ಗಾಯ

0
37

ಹಾವೇರಿ: ಸಿಡಿಲು ಬಡಿದು ತಂದೆ ಸ್ಥಳದಲ್ಲಿಯೇ ಮೃತಪಟ್ಟರೆ, ಮಗ ಗಾಯಗೊಂಡ ಘಟನೆ ಶಿಗ್ಗಾವಿ ತಾಲೂಕಿನ ಮುಕಬಸರಿಕಟ್ಟಿ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.
ಹುಲಿಕಟ್ಟಿ ಗ್ರಾಮದ ಮಾಳಪ್ಪ ಸೋಮಣ್ಣ ಗಡ್ಡೆ(40) ಸಿಡಿಲು ಬಡಿದು ಮೃತಪಟ್ಟ ವ್ಯಕ್ತಿ, ಆಕಾಶ್ ಮಾಳಪ್ಪ(19) ಸಿಡಿಲು ಬಡಿದು ಗಾಯಗೊಂಡ ಯುವಕ.
ಈ ಇಬ್ಬರು ಗುರುವಾರ ಸಂಜೆ ಕುರಿ ಮೇಯಿಸುತ್ತಿದ್ದ ವೇಳೆ ಏಕಾಏಕಿ ಸಿಡಿಲು ಬಡಿದು ಈ ದುರ್ಘಟನೆ ನಡೆದಿದ್ದು, ಘಟನೆಯಲ್ಲಿ ತಂದೆ ಮಾಳಪ್ಪ ಗಡ್ಡೆ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಗಾಯಾಳು ಆಕಾಶ ಅವರನ್ನು ಶಿಗ್ಗಾವಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಶಿಗ್ಗಾವಿ ತಹಶೀಲ್ದಾರ್‌ ರವಿ ಕೊರವರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Previous articleಬಸ್‌ ನಿಲ್ಲಿಸದ್ದಕ್ಕೆ ಅನ್ಯಕೋಮಿನವರಿಂದ ಚಾಲಕ, ನಿರ್ವಾಹಕರ ಮೇಲೆ ಹಲ್ಲೆ
Next articleಮೇ 1ರಿಂದ ಜೋಗ ಜಲಪಾತ ವೀಕ್ಷಣೆಗೆ ಪ್ರವೇಶ ಆರಂಭ