ಸಿಎಂಗೆ ೨೧೦೦ ರೂ. ಮೊತ್ತದ ಚೆಕ್ ಕಳುಹಿಸಿದ ರೈತರು

0
5

ಹಾವೇರಿ: ಬರ ಪರಿಹಾರವಾಗಿ ಸರ್ಕಾರ ೨ ಸಾವಿರ ರೂ. ಪರಿಹಾರ ನೀಡಿದ್ದಕ್ಕೆ ತಿರುಗೇಟು ನೀಡಿರುವ ಜಿಲ್ಲೆಯ ರೈತರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ೨೧೦೦ ರೂ. ಮೊತ್ತದ ಚೆಕ್ ಬರೆದು ಪೋಸ್ಟ್ ಮಾಡಿದ್ದಾರೆ.
ಇಲ್ಲಿಯ ಜಿಲ್ಲಾಡಳಿತ ಭವನದ ಎದುರು ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಜ.೨೩ರಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರು, ಗುರುವಾರ ಸಿಎಂಗೆ ನೂರು ರೂ. ಹೆಚ್ಚು ಹಣ ನಮೂದಿಸಿ ಚೆಕ್ ಮರಳಿಸಿದರು. ಎಕರೆಗೆ ೨೫ ಸಾವಿರ ಬರ ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಧರಣಿ ನಡೆಸುತ್ತಿರುವ ರೈತರು, ಪರಿಹಾರ ನೀಡದಿದ್ದರೆ ಜ. ೨೬ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಧ್ವಜಾರೋಹಣಕ್ಕೆ ಅವಕಾಶ ಕೊಡುವುದಿಲ್ಲ, ರೈತರೇ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ಎಚ್ಚರಿಸಿದರು.

Previous articleಉಗ್ರನ ಜತೆ ನಂಟು: ಭಟ್ಕಳ ಮಹಿಳೆ ವಿಚಾರಣೆ
Next articleಗ್ಯಾಂಗ್ ರೇಪ್ ಪ್ರಕರಣ: ಮತ್ತೆ ನಾಲ್ವರ ಬಂಧನ